ರಾಮಮಂದಿರ ನಿರ್ಮಾಣಕ್ಕೆ 30 ಲಕ್ಷ ದೇಣಿಗೆ ನೀಡಿದ ನಟ ಪವನ್ ಕಲ್ಯಾಣ್

ರಾಮಮಂದಿರ ನಿರ್ಮಾಣಕ್ಕೆ 30 ಲಕ್ಷ ದೇಣಿಗೆ ನೀಡಿದ ನಟ ಪವನ್ ಕಲ್ಯಾಣ್

MS   ¦    Jan 23, 2021 04:09:04 PM (IST)
ರಾಮಮಂದಿರ ನಿರ್ಮಾಣಕ್ಕೆ 30 ಲಕ್ಷ ದೇಣಿಗೆ ನೀಡಿದ ನಟ ಪವನ್ ಕಲ್ಯಾಣ್

ತಿರುಪತಿ: ಅಯೋಧ್ಯ ರಾಮಮಂದಿರ ನಿರ್ಮಾಣಕ್ಕೆ 30 ಲಕ್ಷ ರೂ ದೇಣಿಗೆ ನೀಡಿದ ಟಾಲಿವುಡ್ ನಟ ಹಾಗೂ ಜನಸೇನಾ ಪಕ್ಷದ ಸ್ಥಾಪಕ ಪವನ್ ಕಲ್ಯಾಣ್.

ತಿರುಪತಿಯಲ್ಲಿ ನಡೆದ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಿರುಪತಿ ವೆಂಕಟರಮಣ ದೇವಸ್ಥಾನಕ್ಕೆ ಶುಕ್ರವಾರ ಭೇಟಿನೀಡಿದ ಪವನ್ ಕಲ್ಯಾಣ್, ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ 30 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು. ಅಷ್ಟೇ ಅಲ್ಲದೆ ಸ್ಥಳದಲ್ಲಿಯೇ 1,10,000 ಡಿಡಿಯನ್ನು ತಿರುಪತಿಯ ಆರ್ ಎಸ್ ಎಸ್ ಮುಖಂಡರಿಗೆ ಹಸ್ತಾಂತರಿಸಿದರು.

ನಂತರ ಮಾತನಾಡಿದ ಅವರು, ಮನುಕುಲಕ್ಕೆ ತಾಳ್ಮೆ ಶಾಂತಿ ಹಾಗೂ ಧೈರ್ಯದ ಹಾದಿಯನ್ನು ತೋರಿಸಿಕೊಟ್ಟಿರುವ ಶ್ರೀರಾಮನ ಮಂದಿರವನ್ನು ನಿರ್ಮಿಸಲು ನಾವೆಲ್ಲರೂ ಕೈಜೋಡಿಸಬೇಕು. ಇದೊಂದು ಸಂತೋಷದ ಸಂಗತಿ. ಇಂತಹ ಮಹತ್ತರ ಕಾರ್ಯಕ್ಕೆ ಸಾಮಾನ್ಯ ಜನರು ಕೂಡ ದೇಣಿಗೆ ನೀಡಲು ಮುಂದಾಗಿದ್ದಾರೆ. ಇದು ಎಲ್ಲರಿಗೂ ಹೆಮ್ಮೆ ತರುವ ವಿಷಯವಾಗಿದೆ ಎಂದು ತಿಳಿಸಿದರು.