ಸಿಆರ್ ಸಿಎಫ್-ಮಾವೋವಾದಿಗಳ ಗುಂಡಿನ ಕಾಳಗ: ಯೋಧ ಹುತಾತ್ಮ

ಸಿಆರ್ ಸಿಎಫ್-ಮಾವೋವಾದಿಗಳ ಗುಂಡಿನ ಕಾಳಗ: ಯೋಧ ಹುತಾತ್ಮ

HSA   ¦    Apr 21, 2018 02:12:56 PM (IST)
ಸಿಆರ್ ಸಿಎಫ್-ಮಾವೋವಾದಿಗಳ ಗುಂಡಿನ ಕಾಳಗ: ಯೋಧ ಹುತಾತ್ಮ

ರಾಯಪುರ: ಕೇಂದ್ರೀಯ ಮೀಸಲು ಪಡೆ(ಸಿಆರ್ ಸಿಎಫ್) ಮತ್ತು ಮಾವೋವಾದಿಗಳ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ವೇಳೆ ಈ ಘಟನೆ ನಡೆದಿದೆ. ಸಿಆರ್ ಪಿಎಫ್ ನ 212ನೇ ಬೆಟಾಲಿಯನ್ ಯೋಧರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಬಸ್ತರ್ ದಕ್ಷಿಣ ವಲಯದ ಡಿಐಜಿ ಸುಂದರ್ ರಾಜ್ ಪಿ. ಮಾಹಿತಿ ನೀಡಿದ್ದಾರೆ.

ಮಾವೋವಾದಿಗಳ ಗುಂಡಿಗೆ ಎಎಸ್ ಐ ಅನಿಲ್ ಕುಮಾರ್ ಮೌರ್ಯ ಅವರು ಹುತಾತ್ಮರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.