ವಿಮಾನ ಪ್ರಯಾಣಿಕರಿಗೆ ಆರೋಗ್ಯ ಸೇತು ಆಪ್ ಕಡ್ಡಾಯ

ವಿಮಾನ ಪ್ರಯಾಣಿಕರಿಗೆ ಆರೋಗ್ಯ ಸೇತು ಆಪ್ ಕಡ್ಡಾಯ

HSA   ¦    May 23, 2020 03:48:41 PM (IST)
ವಿಮಾನ ಪ್ರಯಾಣಿಕರಿಗೆ ಆರೋಗ್ಯ ಸೇತು ಆಪ್ ಕಡ್ಡಾಯ

ನವದೆಹಲಿ: ಮೇ 25ರಿಂದ ದೇಶೀಯ ವಿಮಾನಯಾನವು ಆರಂಭವಾಗಲಿದ್ದು, ಪ್ರಯಾಣಿಕರಿಗೆ ಆರೋಗ್ಯ ಸೇತು ಮೊಬೈಲ್ ಆಪ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.

ಈ ಬಗ್ಗೆ ಇಂದು ಮಾಹಿತಿ ನೀಡಿದ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ಮೇ 31ರ ತನಕ ಲಾಕ್ ಡೌನ್ ಜಾರಿಯಲ್ಲಿ ಇರುತ್ತದೆ ಮತ್ತು ದೇಶೀಯ ವಿಮಾನಯಾನವು ಮೇ 25ರಿಂದ ಆರಂಭವಾಗಲಿದೆ ಎಂದು ಅವರು ಸ್ಪಷ್ಟವಾಗಿ ತಿಳಿಸಿದರು.

ಆಗಸ್ಟ್ ಗಿಂತ ಮೊದಲು ವಿದೇಶಿ ವಿಮಾನಯಾನವನ್ನು ಕೂಡ ಸರ್ಕಾರವು ಆರಂಭಿಸಲಿದೆ. ಶ್ರೀಲಂಕಾದಲ್ಲಿ ಉಳಿದಿರುವಂತಹ ಭಾರತೀಯರನ್ನು ಹಡಗು ಅಥವಾ ವಿಮಾನದ ಮೂಲಕ ಕರೆತರಲಾಗುವುದು. ಇದರ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು.

ವಿಮಾನದಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರು ಆರೋಗ್ಯ ಸೇತು ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಇದು ಕಡ್ಡಾಯವಾಗಿರುವುದು ಎಂದರು.