ಅತ್ಯಾಚಾರಿ ಆರೋಪಿಗಳಿಗೆ ಕೋರ್ಟ್ ಕಠಿಣ ಶಿಕ್ಷೆ ನೀಡಲಿ: ಎನ್.ಚಂದ್ರಬಾಬು ನಾಯ್ಡು

ಅತ್ಯಾಚಾರಿ ಆರೋಪಿಗಳಿಗೆ ಕೋರ್ಟ್ ಕಠಿಣ ಶಿಕ್ಷೆ ನೀಡಲಿ: ಎನ್.ಚಂದ್ರಬಾಬು ನಾಯ್ಡು

YK   ¦    Dec 02, 2019 04:56:44 PM (IST)
ಅತ್ಯಾಚಾರಿ ಆರೋಪಿಗಳಿಗೆ ಕೋರ್ಟ್ ಕಠಿಣ ಶಿಕ್ಷೆ ನೀಡಲಿ: ಎನ್.ಚಂದ್ರಬಾಬು ನಾಯ್ಡು

ನವದೆಹಲಿ: ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಮೇಲೆ ಅತ್ಯಾಚಾರ ಎಸಗಿ ಸುಟ್ಟು ಹಾಕಿರುವ ಪ್ರಕರಣವನ್ನು ಖಂಡಿಸಿದ ಟಿಡಿಪಿ ನಾಯಕ ಎನ್.ಚಂದ್ರಬಾಬು ನಾಯ್ಡು, ಆರೋಪಿಗಳಿಗೆ ಕೋರ್ಟ್ ಕ್ರೋರ ಶಿಕ್ಷೆ ನೀಡಬೇಕೆಂದು ಅಗ್ರಹಿಸಿದರು.

ಈ ರೀತಿ ಕೃತ್ಯ ಎಸಗಿದ ದುಷ್ಕರ್ಮಿಗಳಿಗೆ ಕೋರ್ಟ್ ಕೂಡಲೇ ಕಠಿಣ ಶಿಕ್ಷ ನೀಡಬೇಕು. ಇಲ್ಲವಾದಲ್ಲಿ ಇಂತಹ ಕೃತ್ಯ ಎಸಗುವ ಆರೋಪಿಗಳಿಗೆ ಯಾವುದೇ ಭಯವಿರುವುದಿಲ್ಲ. ಕೂಡಲೇ ಕೋರ್ಟ್ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದರು.

ನವೆಂಬರ್ 29ರಂದು ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಮೇಲೆ ಅತ್ಯಾಚಾರ ಎಸಗಿ ಸುಟ್ಟು ಹಾಕಲಾಗಿತ್ತು. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.