ಸಲ್ಮಾನ್ ಖಾನ್ ಗುದ್ದೋಡು ಪ್ರಕರಣ: ಇಂದು ತೀರ್ಪು

ಸಲ್ಮಾನ್ ಖಾನ್ ಗುದ್ದೋಡು ಪ್ರಕರಣ: ಇಂದು ತೀರ್ಪು

Dec 10, 2015 01:21:56 PM (IST)

ಮುಂಬೈ: ಗುದ್ದೋಡು ಪ್ರಕರಣದ ಆರೋಪಿ ಬಾಲಿವುಡ್ ನಟ ಸಲ್ಮಾನ್ ಖಾನ್ ಕೊಂಚ ನಿರಾಳವಾಗಿದ್ದು, ಕುಡಿದು ವಾಹನ ಚಾಲನೆ ಮಾಡಿದ್ದನ್ನು ಸಾಬೀತು ಪಡಿಸಲು ಸಾಕ್ಷಿ ಆಧಾರಗಳು ಇಲ್ಗದಿರುವುದರಿಂದ ಮುಂಬೈ ಹೈಕೋರ್ಟ್ ತೀರ್ಪನ್ನು ಗುರುವಾರ ಹೊರಟಿಸಲಿದೆ.

Salman to be present in Bombay HC for order on hit-and-run case-1ಸಲ್ಮಾನ್ ಖಾನ್ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಮೂರನೇ ದಿನಕ್ಕೆ ಕಾಲಿಟ್ಟ ಸಲ್ಮಾನ್ ಖಾನ್ ಮನವಿ ಅರ್ಜಿಯ ವಿಚಾರಣೆ ಗುರುವಾರ ಕೊನೆಗೊಳ್ಳಲಿದ್ದು, ತೀರ್ಪಿನ ಬಗ್ಗೆ ಕುತೂಹಲ ಹೆಚ್ಚಾಗಿದೆ. ಇಂದು ಸಂಜೆ ಸಲ್ಮಾನ್ ಖಾನ್ ಹಿಟ್ ಆ್ಯಂಡ್ ರನ್ ಪ್ರಕರಣದ ತೀರ್ಪು ಹೊರಬೀಳಲಿದೆ. 2002ರ ಈ ಪ್ರಕರಣದಲ್ಲಿ ಐದುವರ್ಷ ಜೈಲುಶಿಕ್ಷೆಯ ವಿರುದ್ಧ ಸಲ್ಮಾನ್ ಸಲ್ಲಿಸಿರುವ ಮನವಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾ.ಎ .ಆರ್ ಜೋಷಿ, ಪ್ರತ್ಯಕ್ಷ ಸಾಕ್ಷಿ ರವೀಂದ್ರ ಪಾಟೀಲ್ ರ ಹೇಳಿಕೆಗಳ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.