ಕಾಶ್ಮೀರ ಕಣಿವೆಯಲ್ಲಿ ಲಘು ಭೂಕಂಪ

ಕಾಶ್ಮೀರ ಕಣಿವೆಯಲ್ಲಿ ಲಘು ಭೂಕಂಪ

Mar 06, 2017 03:55:30 PM (IST)

ಶ್ರೀನಗರ: ಇಂದು ಬೆಳಗ್ಗೆ 8.41 ಕ್ಕೆ ಕಾಶ್ಮೀರ ಕಣಿವೆಯಲ್ಲಿ ಲಘು ಭೂಕಂಪ ಸಂಭವಿಸಿದ್ದು, 4.8ರಷ್ಟು ರಿಕ್ಟರ್ ಮಾಪಕದಲ್ಲಿ ತೀವ್ರತೆ ದಾಖಲಾಗಿದೆ.

ಹವಾಮಾನ ಇಲಾಖೆಯ ವಕ್ತಾರರೊಬ್ಬರು ತಿಳಿಸಿರುವ ಪ್ರಕಾರ ಸೋಮವಾರ ಬೆಳಗ್ಗೆ 8.41ಕ್ಕೆ ಲಘು ತೀವ್ರತೆಯ ಕಂಪನ ಸಂಭವಿಸಿದ್ದು, ಯಾವುದೇ ಸಾವು–ನೋವಿನ ಬಗ್ಗೆ ವರದಿಯಾಗಿಲ್ಲ. ಜೊತೆಗೆ ರಾಜಸ್ತಾನ, ಹರಿಯಾಣ, ಗುಜರಾತ್, ರಾಜ್ಯಗಳಲ್ಲೂ ಭೂಮಿ ಕಂಪಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭೂಕಂಪ ಸಂಭವಿಸುವ ಸಾಧ್ಯತೆಗಳು ಹಿಮಾಲಯ ಪರ್ವತ ಶ್ರೇಣಿಗಳಲ್ಲಿದ್ದು, ಕಣಿವೆ ರಾಜ್ಯದಲ್ಲಿ ಭೂಕಂಪ ಸಂಭವಿಸಬಹುದು ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.