ಆರೋಗ್ಯ ವಲಯಕ್ಕೆ ಕೇಂದ್ರದ ಹೆಚ್ಚಿನ ಗಮನ: ಪ್ರಧಾನಿ ಮೋದಿ

ಆರೋಗ್ಯ ವಲಯಕ್ಕೆ ಕೇಂದ್ರದ ಹೆಚ್ಚಿನ ಗಮನ: ಪ್ರಧಾನಿ ಮೋದಿ

HSA   ¦    Feb 23, 2021 11:36:29 AM (IST)
ಆರೋಗ್ಯ ವಲಯಕ್ಕೆ ಕೇಂದ್ರದ ಹೆಚ್ಚಿನ ಗಮನ: ಪ್ರಧಾನಿ ಮೋದಿ

ನವದೆಹಲಿ: ಈ ವರ್ಷದ ಬಜೆಟ್ ನಲ್ಲಿ ಆರೋಗ್ಯ ವಲಯಕ್ಕೆ ನಿಗದಿ ಮಾಡಿರುವಂತಹ ಅನುದಾನವು ಕೇಂದ್ರ ಸರ್ಕಾರವು ಆರೋಗ್ಯ ವಲಯಕ್ಕೆ ನೀಡುವ ಪ್ರಾದಾನ್ಯತೆಯನ್ನು ಎತ್ತಿ ತೋರಿಸುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಿಳಿಸಿದರು.

ಆರೋಗ್ಯ ವಲಯಕ್ಕೆ ಅನುದಾನವು ಅದ್ಭುತವಾಗಿದೆ. ಇದು ಆರೋಗ್ಯ ವಲಯಕ್ಕೆ ನಮ್ಮ ಬದ್ಧತೆ ತೋರಿಸುತ್ತದೆ. ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಬಂದರೂ ಅದನ್ನು ಎದುರಿಸಲು ಸಜ್ಜಾಗಿರಬೇಕು ಎಂದು ಕೋವಿಡ್-19 ನಮಗೆ ಕಲಿಸಿಕೊಟ್ಟಿದೆ ಎಂದು ಪ್ರಧಾನಿ ಅವರು ಆರೋಗ್ಯ ವಲಯಕ್ಕೆ ನೀಡಿರುವ ಅನುದಾನ ಬಗ್ಗೆ ವೆಬಿನಾರ್ ನಲ್ಲಿ ಹೇಳಿದರು.

ಸಾಂಕ್ರಾಮಿಕದ ವೇಳೆ ಭಾರತದ ಆರೋಗ್ಯ ವಲಯದ ಬಲವನ್ನು ವಿಶ್ವವು ತುಂಬಾ ಹತ್ತಿರದಿಂದ ನೋಡಿದೆ ಎಂದರು.