ಗಣರಾಜ್ಯೋತ್ಸವದಂದು ಅಯೋಧ್ಯೆಯ ಮಂದಿರದ ಸ್ತಂಭ ಚಿತ್ರ ಬಿಡುಗಡೆ

ಗಣರಾಜ್ಯೋತ್ಸವದಂದು ಅಯೋಧ್ಯೆಯ ಮಂದಿರದ ಸ್ತಂಭ ಚಿತ್ರ ಬಿಡುಗಡೆ

MS   ¦    Jan 23, 2021 03:40:20 PM (IST)
ಗಣರಾಜ್ಯೋತ್ಸವದಂದು ಅಯೋಧ್ಯೆಯ ಮಂದಿರದ ಸ್ತಂಭ ಚಿತ್ರ ಬಿಡುಗಡೆ

ನವದೆಹಲಿ: ಅಯೋಧ್ಯೆಯ ರಾಮಮಂದಿರದ ಸ್ತಂಭ ಚಿತ್ರವನ್ನು ಈ ಬಾರಿಯ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಉತ್ತರಪ್ರದೇಶ ಸರ್ಕಾರ ಪ್ರದರ್ಶಿಸಲಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಉತ್ತರಪ್ರದೇಶ ಸರ್ಕಾರ, ಅಯೋಧ್ಯೆಯ ಮಂದಿರ ಕೇವಲ ಒಂದು ರಾಮ ಮಂದಿರದ ವಿಷಯವಲ್ಲ. ಬದಲಾಗಿ ಅಯೋಧ್ಯೆಯ ಸಾಂಸ್ಕೃತಿಕ ಬದುಕು ಹಾಗೂ ಹಲವು ವೈಶಿಷ್ಟ್ಯಗಳ ಆಗರ ವಾಗಿದೆ ಎಂದು ತಿಳಿಸಿದರು.

ಅಷ್ಟೇ ಅಲ್ಲದೆ, ಅಯೋಧ್ಯೆ ಒಂದು ಪವಿತ್ರ ಸ್ಥಳವಾಗಿದೆ. ಕೋಟ್ಯಾಂತರ ಜನರ ನಂಬಿಕೆಯ ತಾಣ. ಹಾಗೆಯೇ ಪ್ರಾಚೀನ ಅಯೋಗ್ಯ ಸಂಸ್ಕೃತಿಯ ಸೊಗಡನ್ನು ಹೊಂದಿದೆ. ಆದ್ದರಿಂದ ಅದನ್ನು ಈ ಮೂಲಕ ಅನಾವರಣಗೊಳಿಸಲು ಇಚ್ಚಿ ಸುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.