ಮ್ಯಾಗಿ ನ್ಯೂಡಲ್ಸ್ ನ ಮರುಪರೀಕ್ಷೆಗೆ ಸುಪ್ರೀಂಕೋರ್ಟ್ ನಿರ್ದೇಶನ

ಮ್ಯಾಗಿ ನ್ಯೂಡಲ್ಸ್ ನ ಮರುಪರೀಕ್ಷೆಗೆ ಸುಪ್ರೀಂಕೋರ್ಟ್ ನಿರ್ದೇಶನ

Dec 16, 2015 03:34:18 PM (IST)

ಹೊಸದಿಲ್ಲಿ: ನೂತನವಾಗಿ ಮಾರುಕಟ್ಟೆಗೆ ಬಂದಿರುವ ಮ್ಯಾಗಿ ನ್ಯೂಡಲ್ಸ್ ಅನ್ನು ಮೈಸೂರಿನ ಲ್ಯಾಬೋರೇಟರಿನಲ್ಲಿ ಮರು ಪರೀಕ್ಷೆ ಮಾಡುವಂತೆ ಬುಧವಾರ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

SC directs testing of Maggi sample by Mysuru lab-1ಮ್ಯಾಗಿ ನ್ಯೂಡಲ್ಸ್ ಮೇಲಿನ ನಿಷೇಧ ತೆರವುಗೊಳಿಸಬೇಕೆಂದು ನೆಸ್ಲೆ ಕಂಪನಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಂತರ ಮ್ಯಾಗಿ ಮೇಲಿನ ನಿಷೇಧವನ್ನು ಕೋರ್ಟ್ ತೆರವುಗೊಳಿಸಿತ್ತು. ಅಲ್ಲದೇ ಹೊಸದಾಗಿ ಮಾರುಕಟ್ಟೆಗೆ ಬಿಡುವ ಮ್ಯಾಗಿ ನ್ಯೂಡಲ್ಸ್ ಅನ್ನು ಪರೀಕ್ಷೆಗೊಳಪಡಿಸಬೇಕು ಎಂದು ನೆಸ್ಲೆ ಇಂಡಿಯಾಕ್ಕೆ ಬಾಂಬೆ ಹೈಕೋರ್ಟ್ ಆದೇಶ ನೀಡಿತ್ತು. ಮ್ಯಾಗಿ ನ್ಯೂಡಲ್ಸ್ ನಲ್ಲಿ ಸೀಸ ಮತ್ತು ಗ್ಲುಟಮೇಟ್ ಅಂಶ ಹೆಚ್ಚಿದೆ ಎಂಬ ಆರೋಪದಡಿಯಲ್ಲಿ ನಿಷೇಧ ಹೇರಲ್ಪಟ್ಟಿತ್ತು.