ವೃದ್ದೆ ತಾಯಿಗೆ ನಿಂದಿಸಿ, ಕಪಾಳಕ್ಕೆ ಹೊಡೆದ ಮಗಳು

ವೃದ್ದೆ ತಾಯಿಗೆ ನಿಂದಿಸಿ, ಕಪಾಳಕ್ಕೆ ಹೊಡೆದ ಮಗಳು

May 24, 2016 04:35:39 PM (IST)

ಹೊಸದಿಲ್ಲಿ: 85 ವರ್ಷದ ತನ್ನ ವೃದ್ದೆ ತಾಯಿಯನ್ನು ನಿಂದಿಸಿ, ಕಪಾಳಕ್ಕೆ ಹೊಡೆದಿರುವ ಘಟನೆ ದೆಹಲಿಯ ಕಲ್ಕಾಜಿಯಲ್ಲಿ ನಡೆದಿದೆ.

Elderly woman assaulted by daughter in Delhi but refuses complaint-1
ತನ್ನ ತಾಯಿಗೆ ನಿಂದಿಸಿ, ಅಮಾನುಶವಾಗಿ ಥಳಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 85 ವರ್ಷದ ವೃದ್ದೆಗೆ 60 ವರ್ಷದ ಮಗಳು ಹೊರಗಡೆ ನಿಂತುಗೊಂಡಿದ್ದ ತಾಯಿಯನ್ನು ಎಳೆದು ಆಕೆಯ ಕಪಾಳಕ್ಕೆ ಹೊಡೆದಿರುವ ವಿಡೀಯೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ವೃದ್ದೆಯನ್ನು ಎಳೆದಾಡುವಾಗ ನೆರೆಮನೆಯವರು ವಿಡೀಯೋ ತೆಗೆದು ಪೊಲೀಸರಿಗೆ ಮಾಹಿತಿ ನೀಡಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಗಳ ವಿರುದ್ದ ದೂರು ದಾಖಲಿಸಿ ಎಂದು ವೃದ್ದೇಯಲ್ಲಿ ಕೇಳಿಕೊಂಡರೂ ವೃದ್ದೆ ಇದು ನಮ್ಮ ಮನೆಯೊಳಗಿನ ವಿಷಯ ಮಗಳ ವಿರುದ್ಧ ದೂರು ನೀಡಲು ಇಷ್ಟವಿಲ್ಲ ಎಂದು ಪೊಲೀಸರಿಗೆ ಹೇಳಿದರು.