ನಾಯಿ ಮರಿ ಹೊತ್ತೊಯದ್ದ ಜೊಮೆಟೊ ಡಿಲಿವರಿ ಬಾಯ್!

ನಾಯಿ ಮರಿ ಹೊತ್ತೊಯದ್ದ ಜೊಮೆಟೊ ಡಿಲಿವರಿ ಬಾಯ್!

HSA   ¦    Oct 09, 2019 01:24:15 PM (IST)
ನಾಯಿ ಮರಿ ಹೊತ್ತೊಯದ್ದ ಜೊಮೆಟೊ ಡಿಲಿವರಿ ಬಾಯ್!

ಪುಣೆ: ಆಹಾರ ಪೂರೈಕೆ ಮಾಡುವ ಸಂಸ್ಥೆಯಾಗಿರುವ ಜೊಮೆಟೊದ ಹುಡುಗನೊಬ್ಬ ನಾಯಿ ಮರಿಯನ್ನು ಹೊತ್ತೊಯ್ದ ಘಟನೆಯು ಇಲ್ಲಿ ನಡೆದಿದೆ.

ವಂದನಾ ಶಾ ಎಂಬವರು ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸೋಮವಾರ ಮನೆಗೆ ಬಂದ ಜೊಮೆಟೊ ಹುಡುಗ ಆಹಾರ ನೀಡಿದ ಬಳಿಕ ಮುದ್ದಿನ ನಾಯಿ ಮರಿಯನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಅವರು ಆರೋಪ ಮಾಡಿದ್ದಾರೆ.

ನಾಯಿ ಮರಿ ಹುಡುಕಾಟ ನಡೆಸುವ ವೇಳೆ ಅಲ್ಲೇ ಇದ್ದ ಜೊಮೆಟೊದ ಹುಡುಗನೊಬ್ಬ ತನ್ನ ಸಹೋದ್ಯೋಗಿ ಇದನ್ನು ಕೊಂಡು ಹೋಗಿರುವುದಾಗಿ ತಿಳಿಸಿದ್ದಾನೆ.

ಆದರೆ ಆ ಹುಡುಗ ಮಾತ್ರ ನಾಯಿಮರಿಯನ್ನು ಹಿಂತಿರುಗಿಸಲು ನಿರಾಕರಿಸಿದ್ದಾನೆ ಎಂದು ತಿಳಿದುಬಂದಿದೆ. ದಂಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಅವರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದು, ನಾಯಿ ಮರಿ ಹುಡುಕಿಕೊಡುವ ಭರವಸೆ ನೀಡಿದ್ದಾರೆ.

ವಂದನಾ ಶಾ ಅವರು ಈ ಬಗ್ಗೆ ಜೊಮೆಟೊ ಕಂಪೆನಿಗೆ ಕೂಡ ದೂರು ನೀಡಿದ್ದಾರೆ.