ಚೆನ್ನೈಗೆ ಮತ್ತೆ ಪ್ರವಾಹ ಭೀತಿ

ಚೆನ್ನೈಗೆ ಮತ್ತೆ ಪ್ರವಾಹ ಭೀತಿ

May 18, 2016 11:11:19 AM (IST)

ಚೆನ್ನೈ: ಕಳೆದ ವರ್ಷದ ಪ್ರವಾಹದಿಂದಾಗಿ ಚೆನ್ನೈ ಅಕ್ಷರಶಃ ನಲುಗಿದ್ದು, ಇದೀಗ ಮತ್ತೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚೆನ್ನೈ ಗೆ ಮತ್ತೆ ಪ್ರವಾಹ ಭೀತಿ ಶುರುವಾಗಿದೆ.

ಚೈನ್ನೈ ಸೇರಿದಂತೆ ಕರಾವಳಿ ತೀರದಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿದ್ದು, ಇದೀಗ ಚಂಡಮಾರುತ ಭೀತಿ ಶುರುವಾಗಿದೆ. ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಚೆನ್ನೈನಲ್ಲಿ ಗಂಟೆಗೆ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಚಂಡಮಾರುತ ಭೀತಿ ಶುರುವಾಗಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಚೆನ್ನೈನಿಂದ ಆಂಧ್ರ ಕರಾವಳಿ ತೀರದೆಡೆಗೆ ಚಂಡಮಾರುತ ಸಾಗುತ್ತಿದ್ದು ಆಂಧ್ರದ ಕರಾವಳಿ ತೀರಗಳಲ್ಲಿಯೂ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.