ಗಣೇಶ ವಿಸರ್ಜನೆ ವೇಳೆ ವೇಳೆ ದುರಂತ: 15 ಮಂದಿ ಸಾವು

ಗಣೇಶ ವಿಸರ್ಜನೆ ವೇಳೆ ವೇಳೆ ದುರಂತ: 15 ಮಂದಿ ಸಾವು

Sep 06, 2017 03:50:39 PM (IST)
ಗಣೇಶ ವಿಸರ್ಜನೆ ವೇಳೆ ವೇಳೆ ದುರಂತ: 15 ಮಂದಿ ಸಾವು

ಮುಂಬೈ: ಕರ್ತವ್ಯನಿರತ ಪೊಲೀಸ್ ಸೇರಿದಂತೆ ಮಹಾರಾಷ್ಟ್ರದಾದ್ಯಂತ ಒಟ್ಟು 15 ಮಂದಿ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಅವಘಡಗಳಲ್ಲಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ.

ಅಪ್ರಾಪ್ತ ಮಕ್ಕಳು ಹಾಗೂ ಕರ್ತವ್ಯನಿರತ ಪೊಲೀಸರು ಸೇರಿದಂತೆ ಒಟ್ಟು 15ಮಂದಿ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮನೆಯಲ್ಲಿ ಪ್ರತಿಷ್ಠಾಪಿಸಿದ್ದ ಸಾವಿರಾರು ಗಣೇಶ ಮೂರ್ತಿಗಳನ್ನು ನಿನ್ನೆ ವಿಸರ್ಜನೆ ಮಾಡಲಾಗಿತ್ತು.

ಗಣೇಶ ಮೂರ್ತಿ ವಿಸರ್ಜನೆ ಮಾಡುತ್ತಿದ್ದ ವೇಳೆ ಇಂದ್ರಯಾನಿ ನದಿಯಲ್ಲಿ ನಾಲ್ಕು ಮಂದಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಜಲ್'ಗಾಂವ್ ನಲ್ಲಿ ಇಬ್ಬರು, ನಾಶಿಕ್ ಹಾಗೂ ಬೀಡ್ ನಲ್ಲಿ ಇಬ್ಬರು ರಂಗಾಬಾದ್ ನಲ್ಲಿ ಸಂಭವಿಸಿದ ಅವಘಡಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಕರ್ತವ್ಯ ನಿರತರಾಗಿದ್ದ ಸಹಾಯಕ ಸಬ್ ಇನ್ಸ್'ಪೆಕ್ಟರ್ ಪರೇಲ್ ನ ಲಾಲ್'ಬಾಗ್ ನಲ್ಲಿ ಗಣೇಶನ ಉತ್ಸವದ ವೇಳೆ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು, ಪುಣೆಯ ಇಂದ್ರಯಾನಿ ನದಿಯಲ್ಲಿ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದಾನೆ.