ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದ ಪ್ರಿಯತಮೆ

ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದ ಪ್ರಿಯತಮೆ

May 17, 2016 03:45:15 PM (IST)

ಲಕ್ನೋ: ಮೊದಲ ಬಾರಿಗೆ ಮಹಿಳೆಯೋರ್ವಳು ಪುರಷನ ಮೇಲೆ ಆ್ಯಸಿಡ್ ಎರಚಿದ ಘಟನೆ ಉತ್ತರ ಪ್ರದೇಶದ ಗಾಝಿಯಾಬಾದ್‌ ಜಿಲ್ಲೆಯ ವೈಶಾಲಿಯಲ್ಲಿ ನಡೆದಿದೆ.

ಅಮಿತ್ ವರ್ಮ ಎಂಬಾತ ಆ್ಯಸಿಡ್ ದಾಳಿಗೊಳಗಾದವ. ದೇಶದಲ್ಲಿ ಇದುವರೆಗೆ ನಡೆದ ಆ್ಯಸಿಡ್ ದಾಳಿ ಪ್ರಕರಣಗಳಲ್ಲಿ ಹೆಚ್ಚಾಗಿ ಪುರುಷರು ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ನಡೆದಿದ್ದ ಪ್ರಕರಣ ಹೆಚ್ಚು. ಆದರೆ ಇದೇ ಮೊದಲ ಬಾರಿಗೆ ಮಹಿಳೆಯೋರ್ವಳು ಪುರುಷನೋರ್ವನ ಮೇಲೆ ಆ್ಯಸಿಡ್ ಎರಚಿದ್ದಾಳೆ. ಪ್ರೀತಿಸಿ ಕೈಕೊಟ್ಟನೆಂಬ ಕಾರಣಕ್ಕೆ ಪಶು ವೈದ್ಯನ ಮೇಲೆ ಪ್ರಿಯತಮೆ ನಾಲ್ಕು ಲೀಟರ್ ಆ್ಯಸಿಡ್ ಎರಚಿದ್ದಾಳೆ.

ಆ್ಯಸಿಡ್ ದಾಳಿಗೊಳಗಾದ  ಪಶು ವೈದ್ಯನಾಗಿದ್ದು, ಈತ ಮೇ 16ರಂದು ಎಂದಿನಂತೆ ವೈಶಾಲಿಯ 4ನೇ ಸೆಕ್ಟರ್‌ನಲ್ಲಿರುವ ತನ್ನ ಡಾಗ್ ಕೇರ್ ಕ್ಲಿನಿಕ್‌ಗೆ ತೆರಳಿದ್ದ. ಈ ಸಂದರ್ಭದಲ್ಲಿ ಬಂದ ಆತನ ಪ್ರೇಯಸಿ ಅಮಿತ್ ವರ್ಮಾ ಮೇಲೆ 4 ಲೀಟರ್ ಆ್ಯಸಿಡ್ ಎರಚಿ  ಪರಾರಿಯಾಗಿದ್ದಾಳೆ. ಆ್ಯಸಿಡ್‌ ಗಾಯಗಳಿಂದ ನರಳುತ್ತಿದ್ದ ವೈದ್ಯನನ್ನು ಗಮನಿಸಿದ ಸ್ಥಳೀಯರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ವೈದ್ಯ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಘಟನೆಗೆ ಪ್ರೇಮವೈಫಲ್ಯವೇ ಕಾರಣ ಎನ್ನಲಾಗಿದೆ.