2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿದ ಮೋದಿ

2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿದ ಮೋದಿ

Jun 21, 2016 12:16:49 PM (IST)

ಚಂಡೀಘಡ: ಚಂಡೀಘಡದ ಕ್ಯಾಪಿಟಲ್ ಕಾಂಪ್ಲೆಕ್ಸ್ ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಜನಸ್ತೋಮದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಯೋಗಾಭ್ಯಾಸ ಮಾಡುವ ಮೂಲಕ 2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿದರು.

Make yoga a part of your life: PM Modi at mass Yoga session-1ಇದೇ ವೇಳೆ "ಯೋಗ ದಿನದ ಮುಂದಾಳತ್ವವನ್ನು ಭಾರತ ವಹಿಸಿರುವುದು ನನಗೆ ಹೆಮ್ಮೆಯ ಸಂಗತಿ ಎಂದ ಪ್ರಧಾನಿ ನರೇಂದ್ರ ಮೋದಿ, ಈ ವಿಶಿಷ್ಟ ಕಾರ್ಯಕ್ರಮದಿಂದ ಇಡೀ ದೇಶದ ಜನತೆ  ಒಂದಾಗಿದ್ದೇವೆ. ಯೋಗ ದಿನಕ್ಕೆ ಬೇರಾವ ದಿನವೂ ಸರಿಸಾಟಿಯಲ್ಲ. ಸಕಲ ರೋಗಕ್ಕೂ ದಿವೌಷಧವಾದ ಯೋಗವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪ್ರಿಯ ಗೊಳಿಸಲಾಗುವುದು. ಈ  ನಿಟ್ಟಿನಲ್ಲಿ ಮುಂದಿನ ವರ್ಷದಿಂದ ಯೋಗದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲಾಗುವುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ತಲಾ ಒಬ್ಬರು  ಯೋಗಸಾಧಕರಿಗೆ ಪ್ರಶಸ್ತಿ ನೀಡಲು ಕ್ರಮ ಕೈಗೊಳ್ಳುತ್ತೇನೆ. ಇದಕ್ಕಾಗಿ ನುರಿತ ಯೋಗ ತಜ್ಞರನ್ನು ನೇಮಿಸಲಾಗುವುದು.. ಯೋಗಕ್ಕೆ ಬಡವ ಶ್ರೀಮಂತರೆಂಬ ಯಾವುದೇ ಭೇದ-ಭಾವವಿಲ್ಲ. ಯೋಗವನ್ನು  ಸಾಮಾನ್ಯರಲ್ಲಿ ಸಾಮಾನ್ಯರೂ ಕೂಡ ಮಾಡಬಹುದಾಗಿದ್ದು, ಇದು ಪರಲೋಕದ ವಿಜ್ಞಾನವಲ್ಲ ಇಹಲೋಕದ ಜ್ಞಾನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.  

ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಏಕಕಾಲಕ್ಕೆ ಯೋಗಾಭ್ಯಾಸ ಮಾಡುವ ಮೂಲಕ ಯೋಗ ದಿನಾಚರಣೆಗೆ ವಿದ್ಯುಕ್ತ ಚಾಲನೆ ನೀಡಿದರು.