ಡೆಂಗ್ಯೂ ಸೊಳ್ಳೆ ಪತ್ತೆ: ಕ್ರಿಕೆಟಿಗ ಗಂಗೂಲಿಗೆ ನೋಟಿಸ್

ಡೆಂಗ್ಯೂ ಸೊಳ್ಳೆ ಪತ್ತೆ: ಕ್ರಿಕೆಟಿಗ ಗಂಗೂಲಿಗೆ ನೋಟಿಸ್

HSA   ¦    Nov 24, 2017 01:38:48 PM (IST)
ಡೆಂಗ್ಯೂ ಸೊಳ್ಳೆ ಪತ್ತೆ: ಕ್ರಿಕೆಟಿಗ ಗಂಗೂಲಿಗೆ ನೋಟಿಸ್

ಕೊಲ್ಕತ್ತಾ: ಟೀಂ ಇಂಡಿಯಾದ ಮಾಜಿ ಕಪ್ತಾನ ಸೌರವ್ ಗಂಗೂಲಿ ಮನೆಯ ಆವರಣದಲ್ಲಿ ಡೆಂಗ್ಯೂ ಹರಡಬಲ್ಲಂತಹ ಸೊಳ್ಳೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕೊಲ್ಕತ್ತಾ ಮಹಾನಗರ ಪಾಲಿಕೆ ನೋಟಿಸ್ ಜಾರಿ ಮಾಡಿದೆ. ಗಂಗೂಲಿ ಅವರ ಹಿರಿಯ ಸೋದರ, ಮಾಜಿ ರಣಜಿ ಆಟಗಾರ ಸ್ನೇಹಶಿಶ್ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಲ್ಕತ್ತಾದ ಬೆಹಾಲಾದಲ್ಲಿರುವ ಗಂಗೂಲಿ ನಿವಾಸದಲ್ಲಿ ಡೆಂಗ್ಯೂ ಸೊಳ್ಳೆಗಳ ಲಾರ್ವಾ ಪತ್ತೆಯಾಗಿತ್ತು. ಮನೆಯ ಸುತ್ತಮುತ್ತಲು ಸ್ವಚ್ಛವಾಗಿಡುವಂತೆ ನಾವು ನ.19ರಂದು ನಾವು ಸೂಚಿಸಿದ್ದೆವು ಎಂದು ಕೊಲ್ಕತ್ತಾ ಮಹಾನಗರ ಪಾಲಿಕೆ ಸದಸ್ಯ ಅತಿನ್ ಘೋಷ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಶುಕ್ರವಾರ ಮತ್ತೆ ಪರಿಶೀಲನೆ ನಡೆಸಿದಾಗ ಅವರ ಮನೆಯ ಆವರಣದಲ್ಲಿ ಸೊಳ್ಳೆಗಳ ಲಾರ್ವಾ ಪತ್ತೆಯಾಗಿದೆ. ಇದರಿಂದ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದರು.

ಗಂಗೂಲಿ ಸೋದರ ಸ್ನೇಹಶಿಶ್ ಗೆ ಡೆಂಗ್ಯೂ ಇರುವುದು ಪರೀಕ್ಷೆಯಿಂದ ಪತ್ತೆಯಾಗಿದೆ. ಅವರ ಆರೋಗ್ಯ ಸ್ಥಿತಿ ಈಗ ಸುಧಾರಿಸಿದೆ ಎಂದು ತಿಳಿಸಿದರು.