ಮಸೀದಿ ಮೇಲೆ ಬಾಂಬ್ ದಾಳಿ: 150ಕ್ಕೂ ಹೆಚ್ಚು ಸಾವು

ಮಸೀದಿ ಮೇಲೆ ಬಾಂಬ್ ದಾಳಿ: 150ಕ್ಕೂ ಹೆಚ್ಚು ಸಾವು

HSA   ¦    Nov 24, 2017 08:02:39 PM (IST)
ಮಸೀದಿ ಮೇಲೆ ಬಾಂಬ್ ದಾಳಿ: 150ಕ್ಕೂ ಹೆಚ್ಚು ಸಾವು

ಕೈರೋ: ಈಜಿಪ್ಟ್ ನಲ್ಲಿ ಮಸೀದಿ ಮೇಲೆ ಉಗ್ರರು ನಡೆಸಿರುವ ಬಾಂಬ್ ದಾಳಿಯಲ್ಲಿ ಸುಮಾರು 184 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ಐಸಿಸ್ ವಿರುದ್ಧ ಹೋರಾಡುತ್ತಿರುವ ಈಜಿಪ್ಟ್ ನಲ್ಲಿ ನಡೆದಿರುವ ಭಯಾನಕ ದಾಳಿ ಇದಾಗಿದೆ. ಸಿನಾಯಿ ಪ್ರಾಂತ್ಯದಲ್ಲಿ ಶುಕ್ರವಾರ ಮಸೀದಿಯಲ್ಲಿ ಮಧ್ಯಾಹ್ನದ ಪ್ರಾರ್ಥನೆಗಾಗಿ ಹೆಚ್ಚಿನ ಜನರು ಸೇರಿದ್ದರಿಂದ ಸಾವಿನ ಸಂಖ್ಯೆಯು ಹೆಚ್ಚಾಗಿದೆ. ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟು, ಎಂಬತ್ತು ಮಂದಿ ಗಾಯಗೊಂಡಿದ್ದಾರೆಂದು ವರದಿಗಳು ಹೇಳಿವೆ.

ಜೀಪಿನಲ್ಲಿ ಗುಂಡು ಹಾರಿಸುತ್ತಾ ಮಸೀದಿಯೊಳಗೆ ಪ್ರವೇಶಿಸಿದ ಕೆಲವೇ ಕ್ಷಣಗಳಲ್ಲಿ ಸ್ಪೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಇದು ಆತ್ಮಾಹುತಿ ದಾಳಿಯೆನ್ನಲಾಗಿದೆ.

ಯಾವುದೇ ಸಂಘಟನೆ ಕೂಡ ಈ ದಾಳಿಗೆ ಜವಾಬ್ದಾರಿ ಹೊತ್ತುಕೊಂಡಿಲ್ಲ.