ಅಂಫಾನ್ ಚಂಡಮಾರುತ: ಒಡಿಶಾ, ಪ.ಬಂಗಾಳಕ್ಕೆ ಎನ್ ಡಿಆರ್ ಎಫ್ ತಂಡ

ಅಂಫಾನ್ ಚಂಡಮಾರುತ: ಒಡಿಶಾ, ಪ.ಬಂಗಾಳಕ್ಕೆ ಎನ್ ಡಿಆರ್ ಎಫ್ ತಂಡ

HSA   ¦    May 19, 2020 08:19:51 PM (IST)
ಅಂಫಾನ್ ಚಂಡಮಾರುತ: ಒಡಿಶಾ, ಪ.ಬಂಗಾಳಕ್ಕೆ ಎನ್ ಡಿಆರ್ ಎಫ್ ತಂಡ

ನವದೆಹಲಿ: ಅಂಫಾನ್ ಚಂಡಮಾರುತವು ಬುಧವಾರ ಭೂಮಿಗೆ ಬಡಿಯಲಿದ್ದು, ಇದಕ್ಕೆ ಒಡಿಸ್ಸಾ ಸರ್ಕಾರ ಸಹಿತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ ಡಿಆರ್ ಎಫ್) ಕೂಡ ಸಿದ್ದತೆ ಮಾಡಿಕೊಂಡಿದೆ.

ಕೇಂದ್ರದಿಂದ ಕಳುಹಿಸಲಾಗಿರುವ ಎನ್ ಡಿಆರ್ ಎಫ್ ನ 15 ತಂಡಗಳು ಒಡಿಶಾ, 19 ತಂಡಗಳು ಬಂಗಾಳದಲ್ಲಿ ಸಜ್ಜಾಗಿ ನಿಂತಿವೆ.

ಬುಧವಾರ ಇದು ಭೂಪ್ರದೇಶಕ್ಕೆ ಅಪ್ಪಳಿಸಲಿದ್ದು, ತೀವ್ರತೆಗೆ ಅನುಗುಣವಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಎನ್ ಡಿಆರ್ ಎಫ್ ಮೂಲಗಳು ತಿಳಿಸಿವೆ.