ಮಾಧ್ಯಮಗಳಿಗೆ ಮಸಾಲೆ ನೀಡಬೇಡಿ: ಪ್ರಧಾನಿ ಮೋದಿ ಎಚ್ಚರಿಕೆ

ಮಾಧ್ಯಮಗಳಿಗೆ ಮಸಾಲೆ ನೀಡಬೇಡಿ: ಪ್ರಧಾನಿ ಮೋದಿ ಎಚ್ಚರಿಕೆ

SRJ   ¦    Apr 23, 2018 11:18:53 AM (IST)
ಮಾಧ್ಯಮಗಳಿಗೆ ಮಸಾಲೆ ನೀಡಬೇಡಿ: ಪ್ರಧಾನಿ ಮೋದಿ ಎಚ್ಚರಿಕೆ

ನವದೆಹಲಿ: ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟುಮಾಡುವ ಸದಸ್ಯರಿಗೆ, ಪ್ರಧಾನಿ ನರೇಂದ್ರ ಮೋದಿ ಅವರು ಖಡಕ್ ಸಂದೇಶ ನೀಡಿದ್ದಾರೆ. ಮೈಕ್, ಕ್ಯಾಮೆರಾ ಕಂಡ ಕೂಡಲೇ ಪುಳಕಿತರಾಗಿ ಬೇಜವಾಬ್ದಾರಿತನದಿಂದ ಮನಬಂದಂತೆ ಹೇಳಿಕೆ ನೀಡಿ ಮಾಧ್ಯಮಗಳಿಗೆ ಮಸಾಲೆ ನೀಡಬೇಡಿ ಎಂದು ಮೋದಿ ಅವರು ಬಿಜೆಪಿ ನಾಯಕರಿಗೆ ಸಂದೇಶ ರವಾನಿಸಿದ್ದಾರೆ.

ಬಿಜೆಪಿ ನಾಯಕರು ಮತ್ತು ಜನಪ್ರತಿನಿಧಿಗಳ ಜೊತೆ ನರೇಂದ್ರ ಮೋದಿ ಆಪ್ ಮೂಲಕ ಸಂವಾದ ನಡೆಸಿದ ಪ್ರಧಾನಿ, ವಿವಾದಾತ್ಮಕ ಹೇಳಿಕೆಗಳ ಮೂಲಕ ಮಾಧ್ಯಮಗಳಿಗೆ ಆಹಾರವಾಗಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

'ಪ್ರತೀ ಬಾರಿ ನಾವು ತಪ್ಪು ಮಾಡುವ ಮೂಲಕ ಮಾಧ್ಯಮಗಳಿಗೆ ಮಸಾಲೆಯನ್ನು ಒದಗಿಸುತ್ತೇವೆ. ಕೆಲವೊಮ್ಮೆ ನಾವೇ ದೊಡ್ಡ ತತ್ವಜ್ಞಾನಿಗಳಂತೆ ಕೆಲ ವಿಚಾರಗಳ ವಿಶ್ಲೇಷಣೆ ಮಾಡುತ್ತೇವೆ. ಕ್ಯಾಮೆರಾ ಕಂಡೊಡನೆ ಅವರಿವರ ಬಗ್ಗೆ ಮಾತನಾಡಲು ತೊಡಗುತ್ತೇವೆ. ಈ ತರ ಆದಾಗ ಕೆಲ ಬಾರಿ ಅರ್ಧ ಬೆಂದ ವಿಚಾರಗಳು ಮಾತ್ರ ಹೊರಬರುತ್ತವೆ. ಆದ್ದರಿಂದ ಇಂತವುಗಳಿಂದ ಕೊಂಚ ದೂರವಿರಿ' ಎಂದು ಪ್ರಧಾನಿ ತಿಳಿಸಿದ್ದಾರೆ.

ಭಾರತದಂತಹ ದೊಡ್ಡ ದೇಶದಲ್ಲಿ ಒಂದೆರಡು ಅತ್ಯಾಚಾರ ಪ್ರಕರಣ ಸಾಮಾನ್ಯ. ಅದನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ. ಇಂತಹ ಘಟನೆಗಳು ದುರದೃಷ್ಟಕರ. ಒಂದೆರೆಡು ಪ್ರಕರಣ ಮುಂದಿಟ್ಟುಕೊಂಡು ಅವಾಂತರ ಸೃಷ್ಟಿಸುವುದು ಸರಿಯಲ್ಲ ಎಂದು ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ.