ಸಿಎಂ ಬದಲಾವಣೆ ಕುರಿತು ಸ್ಪಷ್ಟ ಪಡಿಸಿದ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

ಸಿಎಂ ಬದಲಾವಣೆ ಕುರಿತು ಸ್ಪಷ್ಟ ಪಡಿಸಿದ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

Ms   ¦    Jun 10, 2021 03:48:36 PM (IST)
ಸಿಎಂ ಬದಲಾವಣೆ ಕುರಿತು ಸ್ಪಷ್ಟ ಪಡಿಸಿದ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

ನವದೆಹಲಿ : ರಾಜ್ಯ ರಾಜಕಾರಣದಲ್ಲಿ ಇದೀಗ ಚರ್ಚೆಗೆ ಕಾರಣವಾಗುತ್ತಿರುವ ಸಿಎಂ ಬದಲಾವಣೆ ಕುರಿತು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. 

 

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸದ್ಯಕ್ಕೆ ಬದಲಾಯಿಸುವ ಯಾವುದೇ ಯೋಚನೆ ಬಿಜೆಪಿ ವರಿಷ್ಟ ಮಂಡಳಿ ಹೊಂದಿಲ್ಲ ಎಂದು ನವದೆಹಲಿಯಲ್ಲಿ ಮಾತನಾಡಿದ ನಂತರ ಬಿಜೆಪಿ ಹೈಕಮಾಂಡ್ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ .

 

 ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಯಾರು ಕೂಡ ಬಹಿರಂಗ ಹೇಳಿಕೆ ನೀಡಬಾರದು . ಇದನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದರು . ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷರ ಬದಲಾವಣೆ ಸಾಧ್ಯತೆಯನ್ನು ಕೂಡ ಅರುಣ್ ಸಿಂಗ್ ತಳ್ಳಿಹಾಕಿದ್ದಾರೆ .

 

ಅಷ್ಟೇ ಅಲ್ಲದೆ, ಶೀಘ್ರದಲ್ಲಿ ಶಾಸಕರನ್ನು ಭೇಟಿ ಮಾಡಿ ಅವರ ಸಮಸ್ಯೆ ತಿಳಿದುಕೊಳ್ಳುವ ಪ್ರಯತ್ನ ನಡೆಸುವುದಾಗಿ ಅರುಣ್ ಸಿಂಗ್ ಎಲ್ಲಾ ವದಂತಿಗಳ ಕುರಿತು ಸ್ಪಷ್ಟ ಉತ್ತರ ನೀಡಿದ್ದಾರೆ.