ಹೊತ್ತಿ ಉರಿದ ಖಾಸಗಿ ಬಸ್: 25 ಪ್ರಯಾಣಿಕರು ಅದೃಷ್ಟವಶಾತ್ ಪಾರು

ಹೊತ್ತಿ ಉರಿದ ಖಾಸಗಿ ಬಸ್: 25 ಪ್ರಯಾಣಿಕರು ಅದೃಷ್ಟವಶಾತ್ ಪಾರು

Nov 14, 2017 03:31:06 PM (IST)
ಹೊತ್ತಿ ಉರಿದ ಖಾಸಗಿ ಬಸ್: 25 ಪ್ರಯಾಣಿಕರು ಅದೃಷ್ಟವಶಾತ್ ಪಾರು

ವಿಜಯನಗರ: ಖಾಸಗಿ ಬಸ್ಸೊಂದು ಹೊತ್ತಿ ಉರಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದ್ದು, ಬಸ್ ನಲ್ಲಿದ್ದ ಸುಮಾರು 25 ಮಂದಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಆರಕುವಿನಿಂದ ವಿಜಯನಗರಕ್ಕೆ ತೆರಳುತ್ತಿದ್ದ ವಿಜಯಲಕ್ಷ್ಮೀ ಎಂಬ ಹೆಸರಿನ ಖಾಸಗಿ ಬಸ್ ನಲ್ಲಿ ಸುಮಾರು 25 ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಪ್ರಯಾಣಿಕರಿಗೆ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಎಲ್ಲರೂ ಸುರಕ್ಷಿತವಾಗಿ ಬಸ್ ನಿಂದ ಹೊರಬಂದಿದ್ದಾರೆ.

ಪ್ರಯಾಣಿಕರೆಲ್ಲರೂ ಬಸ್ ನಿಂದ ಹೊರಬರುತ್ತಿರುವಂತೆ ಬೆಂಕಿ ಹೆಚ್ಚಾಗಿ ಬಸ್ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಇದನ್ನು ಕೆಲವು ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.