ಹತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಪತ್ತೆ; ನಾಪತ್ತೆಯ ಹಿಂದಿನ ಕಥೆ ತಿಳಿದ ಪೊಲೀಸರು ಶಾಕ್!

ಹತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಪತ್ತೆ; ನಾಪತ್ತೆಯ ಹಿಂದಿನ ಕಥೆ ತಿಳಿದ ಪೊಲೀಸರು ಶಾಕ್!

Ms   ¦    Jun 10, 2021 06:17:11 PM (IST)
ಹತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಪತ್ತೆ; ನಾಪತ್ತೆಯ ಹಿಂದಿನ ಕಥೆ ತಿಳಿದ ಪೊಲೀಸರು ಶಾಕ್!

ಕೇರಳ: ಹತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯೊಬ್ಬಳು ಇದೀಗ ಪತ್ತೆಯಾಗಿತ್ತು ಆಕೆಯ ನಾಪತ್ತೆಯಾಗಿರುವ ಹಿಂದಿನ ಉದ್ದೇಶವನ್ನು ಕೇಳಿದರೆ ಎಲ್ಲರೂ ಒಮ್ಮೆ ಆಶ್ಚರ್ಯ ಚಕಿತರಾಗುತ್ತಾರೆ.  

 

 ಈಕೆಯನ್ನ ಪ್ರಿಯಕರನೇ ತನ್ನ ಮನೆಯಲ್ಲಿ ಯಾರಿಗೂ ತಿಳಿಯದಂತೆ ದಶಕ ಕಾಲ ಅಡಗಿಸಿಟ್ಟಿದ್ದ! ಆ ಮನೆಯಲ್ಲಿದ್ದ ಕುಟುಂಬಸ್ಥರಿಗೂ ಮಗನ ಪ್ರೇಯಸಿ ತಮ್ಮ ಮನೆಯಲ್ಲಿರೋದು ಗೊತ್ತೇ ಇರಲಿಲ್ಲ. ನೆರೆಹೊರೆಯವರಿಗೂ ಒಂದು ಸಣ್ಣ ಸುಳಿವೂ ಸಿಕ್ಕಿರಲಿಲ್ಲ. 

 

ಇಂತಹ ಘಟನೆ, ಕೇರಳದ ಪಾಲಕ್ಕಾಡ್ ಜಿಲ್ಲೆಯ ಅರಿಯೂರು ಸಮೀಪದ ಕರೈಕ್ಕಟ್ಟುಪರಂಬು ಗ್ರಾಮದಲ್ಲಿ ನಡೆದಿದೆ. 2010ರ ಫೆಬ್ರವರಿ 2ರಂದು 19 ವರ್ಷದ ಯುವತಿಯೊಬ್ಬಳು ನಾಪತ್ತೆಯಾಗಿದ್ದಳು. ಮಗಳಿಗಾಗಿ ಈಕೆಯ ಪಾಲಕರು ಹುಡುಕಿದ ಜಾಗವಿಲ್ಲ. ಪೊಲೀಸ್​ ಠಾಣೆಯಲ್ಲಿ ಯುವತಿ ನಾಪತ್ತೆ ಕೇಸ್​ ಕೂಡ ದಾಖಲಾಗಿತ್ತು.

 

ಆದರೆ, ಯುವತಿ ಅದೇ ಗ್ರಾಮದ ಅವಳ ಪ್ರಿಯಕರನ ಮನೆಯಲ್ಲಿ ಇದ್ದಳು. ಯುವತಿ ಮತ್ತು ಯುವಕನ ಮನೆ ಕೇವಲ 100 ಮೀಟರ್​ ಅಂತರದಲ್ಲಿದ್ದರೂ ಯಾರೊಬ್ಬರಿಗೂ 10 ವರ್ಷ ಕಾಲ ಗೊತ್ತೇ ಆಗಿಲ್ಲ. ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ ವೇಳೆ ಕೋಣೆಯ ಕಿಟಕಿ ಮೂಲಕ ಯುವತಿಯನ್ನ ಸ್ನಾನಗೃಹ, ಶೌಚಗೃಹಕ್ಕೆ ಕರೆದೊಯ್ಯುತ್ತಿದ್ದ. ತಾನು ಕೋಣೆಯಲ್ಲೇ ಊಟ ಮಾಡುವೆ ಎಂದು ತಟ್ಟೆಗೆ ಊಟ ಹಾಕಿಕೊಂಡು ಹೋಗುತ್ತಿದ್ದವ ತನ್ನ ಪ್ರೇಯಸಿಗೆ ಕೊಡುತ್ತಿದ್ದ. ತನ್ನ ಕೋಣೆಯೊಳಗೆ ಯಾರಿಗೂ ಪ್ರವೇಶ ನೀಡುತ್ತಿರಲಿಲ್ಲ. ಮನೆಯವರು ಏಕೆ? ಏನು ಪ್ರಶ್ನಿಸುವುದನ್ನು ತಪ್ಪಿಸಲು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಹಾಗಾಗಿ ಮನೆಯವರೂ ಅವನತ್ತ ಹೆಚ್ಚು ಸುಳಿಯುತ್ತಿರಲಿಲ್ಲ. ಕೆಲಸಕ್ಕೆ ಹೋದವ ಬೇಗ ಮನೆಗೆ ಬಂದು ಕೋಣೆ ಸೇರಿಕೊಳ್ಳುತ್ತಿದ್ದ. 

 

ಮೂರು ತಿಂಗಳ ಹಿಂದಷ್ಟೆ ಯುವಕ ನಾಪತ್ತೆಯಾಗಿದ್ದ. ಆತಂಕಗೊಂಡ ಪಾಲಕರು ಪೊಲೀಸ್​ ಠಾಣೆಗೆ ದೂರು ಕೊಟ್ಟಿದ್ದರು. ಇತ್ತೀಚಿಗೆ ಯುವಕ ತನ್ನ ಸಹೋದರನ ಕಣ್ಣಿಗೆ ಬಿದ್ದಿದ್ದ. ಪೊಲೀಸರಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ಯುವಕನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಈ ಗುಟ್ಟು ಹೊರಬಂದಿದ್ದು, ಪೊಲೀಸರು ಕೂಡ ಇದನ್ನು ಕೇಳಿ ದಂಗಾಗಿದ್ದಾರೆ.