ಮನೆ ಬಾಗಿಲಿಗೆ ಬಂದ ದೈತ್ಯಾಕಾರದ ಹಲ್ಲಿ

ಮನೆ ಬಾಗಿಲಿಗೆ ಬಂದ ದೈತ್ಯಾಕಾರದ ಹಲ್ಲಿ

Jun 17, 2016 02:39:34 PM (IST)

ಬ್ಯಾಂಕಾಕ್: ಮನೆಯ ಗೋಡೆಗಳಲ್ಲಿ ಸಾಮಾನ್ಯವಾಗಿ ಹಲ್ಲಿಗಳು ಇದ್ದರೂ ಯಾರೂ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಆದೆರ ಥೈಲ್ಯಾಂಡ್ ನ ಮನೆಯೊಂದರ ಬಾಗಿಲ ಬಳಿ ದೈತ್ಯಾಕಾರದ ಹಲ್ಲಿಯನ್ನು ಕಂಡು ಬೆಚ್ಚಿ ಬಿದ್ದ ಘಟನೆ ನಡೆದಿದೆ.

ಸಾಮಾನ್ಯವಾಗಿ ಕಂಡು ಬರುವ ಹಲ್ಲಿ ಇದಲ್ಲ. ಗಾಡ್ಜಿಲ್ಲಾ ಗಾತ್ರದ ದೈತ್ಯ ಹಲ್ಲಿ. ಬಾಗಿಲನಷ್ಟೇ ಎತ್ತರವಿರುವ ಈ ಹಲ್ಲಿ ತನ್ನ ಬಾಲವನ್ನ ಬಾಗಿಲಿಗೆ ಬಡಿಯುತ್ತಾ ಒಳಗೆ ಪ್ರವೇಶಿಸಲು ಯತ್ನಿಸುತ್ತಿತ್ತು. ಇದರ ಶಬ್ದ ಕೇಳಿ ಮನೆಯವರು ಹೊರಬಂದು ನೋಡಿದಾಗ ಅವರಿಗೆ ಕಂಡಿದ್ದು ದೈತ್ಯಾಕಾರದ ಹಲ್ಲಿ. ಆಶ್ಚರ್ಯದಿಂದ ಆ ಮನೆಯವರು ಕೂಡಲೇ ದೈತ್ಯ ಹಲ್ಲಿಯ ಫೋಟೋ ಕ್ಲಿಕ್ಕಿಸಿ ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ರು. ಅದೂ ಸಾಕಾಗ್ಲಿಲ್ಲ ಅಂತ ಈಗ ಹಲ್ಲಿಯ ವಿಡಿಯೋವನ್ನೂ ಅಪ್‍ಲೋಡ್ ಮಾಡಿದ್ದು ಈ ಪೋಸ್ಟ್ ಈಗ ವೈರಲ್ ಆಗಿದೆ. ಈ ಹಲ್ಲಿಯು ಹಲವು ಬಾರಿ ಮನೆಗೆ ಭೇಟಿ ನೀಡಿದೆ. ಈ ಹಿಂದೆ ಈ ಹಲ್ಲಿಯನ್ನು ಹಿಡಿದು ಕಾಡಿಗೆ ಬಿಟ್ಟಿದ್ದರು. ಆದರೆ ಮತ್ತೆ ವಾಪಾಸ್ ಮನೆಗೆ ಬಂದಿದೆ.