400 ಅಡಿ ಆಳದ ಪ್ರಪಾತಕ್ಕೆ ಉರುಳಿದ ವಾಹನ; 6 ಮಂದಿ ಸಾವು, 18ಮಂದಿ ಗಾಯಾಳು

400 ಅಡಿ ಆಳದ ಪ್ರಪಾತಕ್ಕೆ ಉರುಳಿದ ವಾಹನ; 6 ಮಂದಿ ಸಾವು, 18ಮಂದಿ ಗಾಯಾಳು

MS   ¦    Jan 23, 2021 08:17:03 PM (IST)
400 ಅಡಿ ಆಳದ ಪ್ರಪಾತಕ್ಕೆ ಉರುಳಿದ ವಾಹನ; 6 ಮಂದಿ ಸಾವು, 18ಮಂದಿ ಗಾಯಾಳು

ಮುಂಬೈ: ಮಹಾರಾಷ್ಟ್ರದ ನಂದರ್‌ಬಾರ್‌ ಜಿಲ್ಲೆಯಲ್ಲಿ ಪ್ರಯಾಣಿಕ ವಾಹನವೊಂದು ಉರುಳಿ 6 ಮಂದಿ ಸಾವನ್ನಪ್ಪಿದ್ದು,18 ಮಂದಿ ಗಾಯಗೊಂಡಿದ್ದಾರೆ.

ಶನಿವಾರ ಬೆಳಗ್ಗೆ 10.30ರ ವೇಳೆಗೆ ಈ ಘಟನೆ ನಡೆದಿದ್ದು, ಖಾಡ್ಕಿ ಘಾಟ್‌ ನಲ್ಲಿ 400 ಅಡಿ ಆಳದ ಪ್ರಪಾತಕ್ಕೆ ಉರುಳಿಬಿದ್ದ ಪರಿಣಾವಾಗಿ 6 ಮಂದಿ ಮೃತಪಟ್ಟು,18 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ 7 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ತಿಳಿಸಿವೆ.

ಏಕಾಏಕಿ ವಾಹನವು ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದ ಪರಿಣಾಮ ಈ ಅವಘಡ ಸಂಭವಿಸಿದೆ. ಮೃತರೆಲ್ಲರೂ ಝಾಪಿ ಫ‌ಲಾಯಿ ಗ್ರಾಮದ ನಿವಾಸಿಗಳಾಗಿದ್ದಾರೆ. ಸುಮಾರು 24 ಮಂದಿ (ಬಹುತೇಕ ಕಾರ್ಮಿಕರು) ಮಹೀಂದ್ರಾ ಮ್ಯಾಕ್ಸ್‌ ವಾಹನದಲ್ಲಿ ತೋರನ್ಮಾಲ್‌ಗೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.