ಮುಂಬೈ ಕಪಾಡಿಯಾ ಬಜಾರ್ ನಲ್ಲಿ ಅಗ್ನಿ ಅವಘಡ

ಮುಂಬೈ ಕಪಾಡಿಯಾ ಬಜಾರ್ ನಲ್ಲಿ ಅಗ್ನಿ ಅವಘಡ

Jan 07, 2017 10:40:09 AM (IST)

ಮುಂಬೈ: ಕುರ್ಲಾದಲ್ಲಿರುವ ಕಪಾಡಿಯಾ ಬಜಾರ್ ನಲ್ಲಿ ಇಂದು ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಅಂಗಡಿಗಳು ಸುಟ್ಟು ಭಸ್ಮವಾಗಿವೆ.

ಇಂದು ಬೆಳಿಗ್ಗೆ ಘಟನೆ ಸಂಭವಿಸಿದ್ದು, ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ. ಅಗ್ನಿ ಅವಘಡದಿಂದಾಗಿ ಕೆಲ ಅಂಗಡಿಗಳು ಭಸ್ಮವಾಗಿದ್ದು, ಗೋಡನ್ ನಲ್ಲಿದ್ದ ಸೀರೆ ಹಾಗೂ ಇನ್ನಿತರೆ ವಸ್ತುಗಳು ಸುಟ್ಟು ಕರಕಲಾಗಿವೆ. ಘಟನೆಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.  

ಬೆಂಕಿ ಕಾಣಿಸಿಕೊಂಡಿರುವ ವಿಚಾರ ತಿಳಿಯುತ್ತಿದ್ದಂತೆ ನಾಲ್ಕು ಅಗ್ನಿಶಾಮಕ ದಳದ ವಾಹನಗಳೊಂದಿಗೆ ಸ್ಥಳಕ್ಕಾಗಮಿಸಿರುವ ಅಧಿಕಾರಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ನಡೆಸಿದ್ದಾರೆ.