ನಿರ್ಭಯಾ ಅತ್ಯಾಚಾರ ಪ್ರಕರಣ: ಅಪರಾಧಿಗಳ ಕಾನೂನು ಹೋರಾಟ ಅಂತ್ಯ

ನಿರ್ಭಯಾ ಅತ್ಯಾಚಾರ ಪ್ರಕರಣ: ಅಪರಾಧಿಗಳ ಕಾನೂನು ಹೋರಾಟ ಅಂತ್ಯ

HSA   ¦    Jan 14, 2020 03:48:06 PM (IST)
ನಿರ್ಭಯಾ ಅತ್ಯಾಚಾರ ಪ್ರಕರಣ: ಅಪರಾಧಿಗಳ ಕಾನೂನು ಹೋರಾಟ ಅಂತ್ಯ

ನವದೆಹಲಿ: ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಇದ್ದ ಕೊನೆಯ ಕಾನೂನು ಹೋರಾಟದ ಹಾದಿಯು ಮುಚ್ಚಿದ್ದು, ವಿನಯ್ ಕುಮಾರ್ ಶರ್ಮಾ ಮತ್ತು ಮುಕೇಶ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಮಂಗಳವಾರ ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ದೆಹಲಿ ಕೋರ್ಟ್ ನಾಲ್ಕು ಮಂದಿ ಅಪರಾಧಿಗಳ ವಿರುದ್ಧ ಡೆತ್ ವಾರೆಂಟ್ ಜಾರಿ ಮಾಡಿತ್ತು ಮತ್ತು ಜನವರಿ 22ರಂದು ಇವರಿಗೆ ಗಲ್ಲು ಶಿಕ್ಷೆ ನೀಡಲು ಕೋರ್ಟ್ ಸೂಚಿಸಿತ್ತು.

ಜಸ್ಟಿಸ್ ಎನ್ ವಿ ರಮಣ, ಅರುಣ್ ಮಿಶ್ರಾ, ರೊಹಿನ್ಟೊನ್ ನರಿಮನ್, ಆರ್ ಭಾನುಮತಿ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ಐದು ಸದಸ್ಯರ ನ್ಯಾಯಪೀಠವು ಈ ಅರ್ಜಿಯನ್ನು ವಿಚಾರಣೆ ನಡೆಸಿದೆ.

ಈ ಅಪರಾಧಿಗಳು ಇನ್ನು ರಾಷ್ಟ್ರಪತಿ ಅವರಲ್ಲಿ ಕ್ಷಮಾದಾನ ಕೇಳಬಹುದಾಗಿದೆ. ರಾಷ್ಟ್ರಪತಿ ಅವರಿಗೆ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವ ಅಧಿಕಾರವಿದೆ.

ಕ್ಯುರೇಟಿವ್ ಮತ್ತು ಕ್ಷಮಾದಾನ ಅರ್ಜಿಯನ್ನು ಎರಡು ವಾರಗಳ ಒಳಗಡೆ ಸಲ್ಲಿಸಬೇಕು ಎಂದು ದೆಹಲಿ ಹೈಕೋರ್ಟ್ ಡೆತ್ ವಾರೆಂಟ್ ನೀಡುವ ವೇಳೆ ಹೇಳಿತ್ತು.