ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ಹತ್ತು ಮಂದಿ ಜಲಸಮಾಧಿ

ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ಹತ್ತು ಮಂದಿ ಜಲಸಮಾಧಿ

HSA   ¦    Oct 09, 2019 09:12:25 AM (IST)
ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ಹತ್ತು ಮಂದಿ ಜಲಸಮಾಧಿ

ಧೋಲ್ಪುರ್: ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ಪರ್ಬಾತಿ ನದಿಯಲ್ಲಿ ಮುಳುಗಿ ಹತ್ತು ಮಂದಿ ನೀರು ಪಾಲಾದ ಘಟನೆಯು ರಾಜಸ್ಥಾನದ ಧೋಲ್ಪುರ್ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ವೇಳೆ ನಡೆದಿದೆ.

ಹತ್ತು ಮಂದಿಯ ಶವವನ್ನು ಅಗ್ನಿಶಾಮಕ ದಳದವರು ಈಗಾಗಲೇ ಪತ್ತೆ ಹಚ್ಚಿದ್ದಾರೆ ಮತ್ತು ಇನ್ನು ನಾಲ್ಕು ಮಂದಿಗಾಗಿ ಹುಡುಕಾಟ ನಡೆಯುತ್ತಿದೆ.

ಘಟನೆ ವೇಳೆ ಹತ್ತು ಮಂದಿ ನೀರು ಪಾಲಾಗಿದ್ದಾರೆ. ಹತ್ತು ಮಂದಿಯ ಶವವನ್ನು ಪತ್ತೆ ಮಾಡಲಾಗಿದೆ. ಇನ್ನು ನಾಲ್ಕು ಮಂದಿಯ ಶವಕ್ಕಾಗಿ ಹುಡುಕಾಟ ನಡೆಯುತ್ತಿದೆ ಎಂದು ಧೋಲ್ಪುರ ಜಿಲ್ಲಾಧಿಕಾರಿ ರಾಕೇಶ್ ಜೈಸ್ವಾಲ್ ತಿಳಿಸಿದರು.