ಹೊಸ ಶಿಕ್ಷಣ ನೀತಿಯಿಂದ ಉದ್ಯೋಗ ಕೊಡುವವರ ಸೃಷ್ಟಿ: ಮೋದಿ

ಹೊಸ ಶಿಕ್ಷಣ ನೀತಿಯಿಂದ ಉದ್ಯೋಗ ಕೊಡುವವರ ಸೃಷ್ಟಿ: ಮೋದಿ

HSA   ¦    Aug 01, 2020 08:34:28 PM (IST)
ಹೊಸ ಶಿಕ್ಷಣ ನೀತಿಯಿಂದ ಉದ್ಯೋಗ ಕೊಡುವವರ ಸೃಷ್ಟಿ: ಮೋದಿ

ನವದೆಹಲಿ: ದೇಶದಲ್ಲಿ ಜಾರಿಗೆ ಬರಲಿರುವ ಹೊಸ ಶಿಕ್ಷಣ ನೀತಿಯಿಂದಾಗಿ ಉದ್ಯೋಗ ಹುಡುಕುವವರ ಬದಲಿಗೆ ಉದ್ಯೋಗ ಕೊಡುವವರು ಸೃಷ್ಟಿಯಾಗಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟರು.

ದೇಶದಲ್ಲಿ ಶಿಕ್ಷಣದ ರೂಪರೇಷೆಯನ್ನು ಬದಲಾಯಿಸಲು ಈ ಶಿಕ್ಷಣ ನೀತಿಯನ್ನು ಜಾರಿ ಮಾಡಲಿದೆ ಎಂದು ಪ್ರಧಾನಿ ಅವರು ತಿಳಿಸಿದರು.

ಹೊಸ ಶಿಕ್ಷಣ ನೀತಿ-2020ಯು ಆಂತರಿಕ ಶಿಸ್ತಿನ ಕಲಿಕೆಯಾಗಲಿದ್ದು, ಇಲ್ಲಿ ವಿದ್ಯಾರ್ಥಿಯು ಏನು ಬಯಸುತ್ತಾನೆಯಾ ಅದಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು ಎಂದು ಅವರು ಹೇಳಿದರು.

ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಮಾಡುವುದು ಅಗತ್ಯವಾಗಿತ್ತು ಎಂದು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ನಲ್ಲಿ ಮಾತನಾಡಿದ ಅವರು ತಿಳಿಸಿದರು.