ಪೊಲೀಸರ ಯಶಸ್ವಿ ಕಾರ್ಯಾಚರಣೆ: 16 ಮಾವೋವಾದಿಗಳ ಹತ್ಯೆ

ಪೊಲೀಸರ ಯಶಸ್ವಿ ಕಾರ್ಯಾಚರಣೆ: 16 ಮಾವೋವಾದಿಗಳ ಹತ್ಯೆ

SRJ   ¦    Apr 23, 2018 12:18:08 PM (IST)
ಪೊಲೀಸರ ಯಶಸ್ವಿ ಕಾರ್ಯಾಚರಣೆ: 16 ಮಾವೋವಾದಿಗಳ ಹತ್ಯೆ

ಮುಂಬೈ: ದಕ್ಷಿಣ ಗಡ್ ಚಿರೋಲಿ ಜಿಲ್ಲೆಯ ಕೇಶ್ವಾಪುರ ಅರಣ್ಯ ಪ್ರದೇಶದಲ್ಲಿ ಮಾವೋವಾದಿ ಉಗ್ರರ ಜೊತೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ, ಮಹಾರಾಷ್ಟ್ರ ಪೊಲೀಸ್ ಪಡೆಯ ವಿಶೇಷ ಧಾಳಿ ದಳ 16 ಮಂದಿ ಮಾವೋವಾದಿ ಉಗ್ರರನ್ನು ಹತ್ಯೆ ಮಾಡಿದೆ.

ಮೃತಪಟ್ಟವರಲ್ಲಿ ಇಬ್ಬರು ಮುಖಂಡರು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ ಎನ್ನಲಾಗಿದ್ದು, 10 ಮಂದಿ ಬಂಡುಕೋರರು ಗಾಯಗೊಂಡಿದ್ದಾರೆ. ಸತತ ಮೂರು ಗಂಟೆಗಳ ಕಾಲ ನಡೆದ ಹೋರಾಟದಲ್ಲಿ ಗಾಯಾಳುಗಳು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ನಿಖರ ಮಾಹಿತಿಯ ಹಿನ್ನಲೆಯಲ್ಲಿ ಶನಿವಾರ ರಾತ್ರಿ ಪೊಲೀಸರು ಕ್ಯೂಬಿಂಗ್ ನಡೆಸಿದರು. ರವಿವಾರ ಬೆಳಗ್ಗೆ 10ರ ಸುಮಾರಿಗೆ ಗುಂಡಿನ ಚಕಮಕಿ ಆರಂಭವಾಯಿತು. ಇಡೀ ಪ್ರದೇಶವನ್ನು ಪೊಲೀಸ್ ಪಡೆ ಸುತ್ತುವರಿದು, ಕಾರ್ಯಾಚರಣೆ ಕೈಗೊಂಡಿದೆ ಎಂದು ಐಜಿಪಿ ಶರದ್ ಶೆಲರ್ ಮಾಧ್ಯಮಕ್ಕೆ ವಿವರಣೆ ನೀಡಿದ್ದಾರೆ.