ಸುಪ್ರೀಂ ಕೋರ್ಟ್ ವೆಬ್ ಸೈಟ್ ಹ್ಯಾಕ್ ಮಾಡಿದ ಕಿಡಿಗೇಡಿಗಳು

ಸುಪ್ರೀಂ ಕೋರ್ಟ್ ವೆಬ್ ಸೈಟ್ ಹ್ಯಾಕ್ ಮಾಡಿದ ಕಿಡಿಗೇಡಿಗಳು

SRJ   ¦    Apr 19, 2018 04:58:51 PM (IST)
ಸುಪ್ರೀಂ ಕೋರ್ಟ್ ವೆಬ್ ಸೈಟ್ ಹ್ಯಾಕ್ ಮಾಡಿದ ಕಿಡಿಗೇಡಿಗಳು

ನವದೆಹಲಿ: ರಕ್ಷಣಾ ಇಲಾಖೆ ಹಾಗೂ ಇತರೇ ಸರ್ಕಾರಿ ಇಲಾಖೆಗಳ ವೆಬ್ ಸೈಟ್ ಹ್ಯಾಕ್ ಮಾಡಿರುವ ಹಿಂದೆಯೇ ಇದೀಗ ಸುಪ್ರೀಂ ಕೋರ್ಟ್ ವೆಬ್ ಸೈಟ್ ಅನ್ನು ಯಾರೋ ಕಿಡಿಗೇಡಿಗಳು ಹ್ಯಾಕ್ ಮಾಡಿರುವ ಘಟನೆ ಗುರುವಾರ ನಡೆದಿದೆ ಎಂದು ವರದಿಯಾಗಿದೆ.

ಸಿಬಿಐ ನ್ಯಾಯಾಧೀಶ ಬಿ.ಹೆಚ್.ಲೋಯ ಅವರ ಸಾವು ಸಹಜ ಕಾರಣದಿಂದ ಸಂಭವಿಸಿದೆ ಎಂದು ಸುಪ್ರೀಂ ಕೋರ್ಟ್ ಸಾವಿನ ಕುರಿತು ಸ್ವತಂತ್ರ ತನಿಖೆಗೆ ಒತ್ತಾಯಿಸಿ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನು ವಜಾ ಮಾಡಿದ, ಬೆನ್ನಲ್ಲೇ ಸುಪ್ರೀಂ ಕೋರ್ಟ್ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ.

ಈಗಾಗಲೇ ಹ್ಯಾಕ್ ಮಾಡಿರುವ ಸ್ಕ್ರೀನ್ ಶಾಟ್ ಚಿತ್ರಗಳು ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬ್ರೆಜಿಲ್ ದೇಶದಲ್ಲಿ ಹ್ಯಾಕ್ ಮಾಡಿರುವ ಅನುಮಾನ ವ್ಯಕ್ತವಾಗಿದೆ.

ಹ್ಯಾಕ್ ಮಾಡಿರುವವರು 'ಹೈಟೆಕ್ ಬ್ರೆಜಿಲ್ ಹ್ಯಾಕ್ ಟೀಂ' ಎಂದು ಬರೆದು, ಬ್ರೆಜಿಲ್ ದೇಶದ ಮರಿಜಿನಾ ಹೂವಿನ ಚಿತ್ರವನ್ನು ಪ್ರಕಟಿಸಿದ್ದಾರೆ.