News Kannada
Friday, February 23 2024
ವಿದೇಶ

ಖ್ಯಾತ ಹೂಡಿಕೆತಜ್ಞ ಚಾರ್ಲೀ ಮುಂಗರ್ ನಿಧನ

ಅಮೆರಿಕದ ವಿಶ್ವಖ್ಯಾತ ಹೂಡಿಕೆದಾರ ವಾರನ್ ಬಫೆಟ್ ಅವರ ಬಿಸಿನೆಸ್ ಪಾರ್ಟ್ನರ್ ಮತ್ತು ಆಪ್ತ ಸ್ನೇಹಿತರಾಗಿದ್ದ ಚಾರ್ಲೀ ಮುಂಗರ್ ಅವರ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು. ಬರ್ಕ್​ಶೈರ್ ಹಾಥವೇ ಸಂಸ್ಥೆ ಈ ನಿಧನವಾರ್ತೆಯನ್ನು ಮಾಧ್ಯಮಗಳಿಗೆ ತಿಳಿಸಿದೆ.
Photo Credit : News Kannada

ಕ್ಯಾಲಿಫೋರ್ನಿಯಾ: ಅಮೆರಿಕದ ವಿಶ್ವಖ್ಯಾತ ಹೂಡಿಕೆದಾರ ವಾರನ್ ಬಫೆಟ್ ಅವರ ಬಿಸಿನೆಸ್ ಪಾರ್ಟ್ನರ್ ಮತ್ತು ಆಪ್ತ ಸ್ನೇಹಿತರಾಗಿದ್ದ ಚಾರ್ಲೀ ಮುಂಗರ್ ಅವರ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು. ಬರ್ಕ್​ಶೈರ್ ಹಾಥವೇ ಸಂಸ್ಥೆ ಈ ನಿಧನವಾರ್ತೆಯನ್ನು ಮಾಧ್ಯಮಗಳಿಗೆ ತಿಳಿಸಿದೆ.

‘ಕ್ಯಾಲಿಫೋರ್ನಿಯಾ ಆಸ್ಪತ್ರೆಯೊಂದರಲ್ಲಿ ಇಂದು ಬೆಳಗ್ಗೆ ಚಾರ್ಲೀ ಮುಂಗರ್ ಅವರು ನಿಧನ ಹೊಂದಿದರು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ,’ ಎಂದು ಬರ್ಕ್​ಶೈರ್ ಹಾಥವೇ ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನು ‘ಚಾರ್ಲೀ ಅವರ ಪಾಲ್ಗೊಳ್ಳುವಿಕೆ, ಹಿತನುಡಿ ಇಲ್ಲದೇ ಇವತ್ತು ಬರ್ಕ್​ಶೈರ್ ಹಾತವೇ ಇವತ್ತಿನ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಸಂಸ್ಥೆಯ ಸಂಸ್ಥಾಪಕ ವಾರನ್ ಬಫೆಟ್ ಕೂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಾರನ್ ಬಫೆಟ್ ಅವರಿಗೆ 93 ವರ್ಷ ವಯಸ್ಸಾಗಿದ್ದರೆ, ಚಾರ್ಲೀ ಮುಂಗರ್ ಅವರಿಗೆ 99 ವರ್ಷ ವಯಸ್ಸಾಗಿತ್ತು. ಇಬ್ಬರೂ ಕೂಡ ಅಮೆರಿಕದ ನೆಬ್ರಾಸ್ಕ ರಾಜ್ಯದ ಒಮಾಹ ಪ್ರದೇಶದಲ್ಲಿ ಜನಿಸಿ ಅಲ್ಲಿಯೇ ಬೆಳೆದವರು. ಇವರಿಬ್ಬರು ಉತ್ತಮ ಸ್ನೇಹಿತರಾಗಿದ್ದು, ಉತ್ತಮ ಬಾಂದವ್ಯ ಹೊಂದಿದ್ದರು.

ಚಾರ್ಲೀ ಮುಂಗರ್ 1978ರಲ್ಲಿ ಬರ್ಕ್​ಶೈರ್ ಹಾಥವೇ ಸಂಸ್ಥೆಗೆ ವೈಸ್ ಛೇರ್ಮನ್ ಆಗಿ ಕೆಲಸಕ್ಕೆ ಸೇರಿದರು. ಆಗ ಅದು ಒಂದು ಸಣ್ಣ ಜವಳಿ ಸಂಸ್ಥೆಯಾಗಿತ್ತು. ಇವರ ವ್ಯಾವಹಾರಿಕ ಚತುರತೆಯಿಂದ ಇವತ್ತು ಅದು 780 ಬಿಲಿಯನ್ ಡಾಲರ್​ಗೂ ಹೆಚ್ಚು ಮೌಲ್ಯದ ಬೃಹತ್ ಸಮೂಹ ಸಂಸ್ಥೆಯಾಗಿ ಬೆಳೆದಿದೆ.

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು