News Karnataka Kannada
Saturday, April 20 2024
Cricket
ವಿದೇಶ

ಬಿಜೆಪಿಯಿಂದ ಸಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ: ರಾಹುಲ್‌ ಗಾಂಧಿ

BJP attacking constitutional institutions: Rahul Gandhi
Photo Credit : News Kannada

ಸ್ಯಾನ್ ಫ್ರಾನ್ಸಿಸ್ಕೋ: ಆರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಜಾತಿ ಆಧಾರಿತ ಜನಗಣತಿಗಾಗಿ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ಅಲ್ಲದೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಭಾರತದ ಸಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿವೆ ಎಂದು ಆರೋಪಿಸಿದ್ದಾರೆ.

ಭಾರತದ ಸೌಂದರ್ಯ ಅದರ ವೈವಿಧ್ಯತೆಯಲ್ಲಿದೆ. ಯಾವುದೇ ಭಾಷೆಯ ಮೇಲಿನ ಆಕ್ರಮಣವು ದೇಶದ ಸಂವಿಧಾನದ ಮೇಲಿನ ದಾಳಿಯಾಗಿದೆ ಆದರೆ ಕಾಂಗ್ರೆಸ್‌ ಭಾಷೆಯ ಮೇಲಿನ ದಾಳಿಗೆ ಅವಕಾಶ ನೀಡುವುದಿಲ್ಲ ಎಂದರು.

ಆರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಭಾರತೀಯ ವಲಸಿಗರೊಂದಿಗೆ ಇಲ್ಲಿ ಸಂವಾದ ನಡೆಸಿದ ರಾಹುಲ್ ಗಾಂಧಿ, “ಭಾರತವು ವೈವಿಧ್ಯಮಯ ದೇಶ. ಇಲ್ಲಿ ಎಲ್ಲ ಭಾಷೆ., ಧರ್ಮ, ಆಚಾರ ವಿಚಾರಗಳಿಗೆ ಅವಕಾಶವಿದೆ ಎಂದರು.

ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯರನ್ನು ಭಾರತೀಯ ಸಂಸ್ಕೃತಿಯ ರಾಯಭಾರಿಗಳು ಎಂದು ಕರೆದ ಅವರು, “ನೀವೆಲ್ಲರೂ ಇಲ್ಲಿಗೆ ಬರಲು ಸಾಂಸ್ಕೃತಿಕ ವೈವಿಧ್ಯವೇ ಕಾರಣ” ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು