News Kannada
Saturday, March 02 2024
ವಿದೇಶ

ಜಿ20ಯಲ್ಲಿ ಭಾರತವನ್ನು ಟೀಕಿಸಲು ಮಿತ್ರ ದೇಶಗಳಿಗೆ ಮನವಿ ಮಾಡಿತ್ತಂತೆ ಕೆನಡಾ

Photo Credit : News Kannada

ನವದೆಹಲಿ: ಕೆನಡಾದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಈ ವಿಚಾರಕ್ಕೆ ಸಂಬಂಧಿದಂತೆ ಭಾರತವನ್ನು ಜಿ20 ಶೃಂಗದ ವೇಳೆ ಟೀಕಿಸುವಂತೆ ಅಮೆರಿಕ ಹಾಗೂ ಇತರ ಮಿತ್ರ ದೇಶಗಳಿಗೆ ಆಗ್ರಹಿಸಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಆದರೆ ಅಮೆರಿಕಗೆ ಚೀನಾ ವಿರುದ್ಧ ರಾಜತಾಂತ್ರಿಕವಾಗಿ ಹೋರಾಡಲು ಭಾರತ ಪ್ರಮುಖ ಸ್ಥಾನದಲ್ಲಿರುವ ಕಾರಣ ಜೋ ಬೈಡೆನ್‌ ಭಾರತದ ವಿರುದ್ಧ ಜಿ20 ಸಭೆಯಲ್ಲಿ ಖಲಿಸ್ತಾನಿ ವಿಷಯವನ್ನು ಪ್ರಸ್ತಾಪಿಸಲಿಲ್ಲ ಎಂದು ದಿ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆ ವರದಿ ಮಾಡಿದೆ.

ನಂತರ  ಕೆನಡಾ ಸರ್ಕಾರ ಭಾರತೀಯ ರಾಯಭಾರ ಸಿಬ್ಬಂದಿ ಪವನ್‌ ಕುಮಾರ್ ರಾಯ್‌ ಅವರನ್ನು ವಜಾ ಮಾಡಿತ್ತು. ಇವರು ಪಂಜಾಬ್ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿದ್ದು, ಜಲಂಧರ್‌ನ ಎಸ್‌ಎಸ್‌ಪಿಯಾಗಿ, ಪಂಜಾಬ್‌ನ ಎಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದರು. ಇವರು ಕೆನಡಾದ ಒಟ್ಟಾವದಲ್ಲಿ ಭಾರತದ ವಿದೇಶಿ ಗುಪ್ತಚರ ಸಂಸ್ಥೆಯಾದ ‘ರಾ’ ಏಜೆಂಟ್‌ ಆಗಿದ್ದರು ಎಂಬುದು ಕೆನಡಾ ಆರೋಪ.

ಜಿ-20 ಶೃಂಗಸಭೆಗೆ ಬಂದ ವೇಳೆ ಖಲಿಸ್ತಾನಿಗಳನ್ನು ಮಟ್ಟ ಹಾಕಲಾಗದು, ಅವರ ಪ್ರತಿಭಟನೆಯನ್ನು ನಿಲ್ಲಿಸಲಾಗದು ಎಂದು ಭಾರತಕ್ಕೆ ಬಂದಿದ್ದ ವೇಳೆ ಹೇಳಿಕೆ ನೀಡಿದ್ದ ಜಸ್ಟೀನ್ ಟ್ರುಡೋ ಅವರ ಸರ್ಕಾರ ಕಳೆದ ಸೋಮವಾರ ಖಲಿಸ್ತಾನಿ ಉಗ್ರನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾದಲ್ಲಿರುವ ಭಾರತದ ಉನ್ನತ ರಾಜತಾಂತ್ರಿಕ ಅಧಿಕಾರಿಯನ್ನು ವಜಾ ಮಾಡಿತ್ತು. ಭಾರತದ ಮೋಸ್ಟ್ ವಾಂಟೆಂಡ್ ಲಿಸ್ಟ್‌ನಲ್ಲಿದ್ದ ಖಲಿಸ್ತಾನ್ ಉಗ್ರ ಹರ್‌ದೀಪ್‌ ಸಿಂಗ್ ನಿಜ್ಜರ್‌ನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು