NewsKarnataka
Sunday, October 24 2021

ಮುಂಬೈ

ನರ್ಸ್‌ ಕಣ್ತಪ್ಪಿನಿಂದ ಒಂದೇ ದಿನ ಮೂರು ಡೋಸ್‌ ಲಸಿಕೆ ಪಡೆದ ಮಹಿಳೆ

ಥಾಣೆ: ಕರೊನಾ ಲಸಿಕಾ ಕೇಂದ್ರದ ನಿರ್ಲಕ್ಷ್ಯದಿಂದಾಗಿ ಮಹಾರಾಷ್ಟ್ರದ ಥಾಣೆ ನಿವಾಸಿಯೊಬ್ಬರು ಒಂದೇ ದಿನದಲ್ಲಿ ಮೂರು ಡೋಸ್​ ಕರೊನಾ ಲಸಿಕೆ ಪಡೆದಿರುವ ಆತಂಕಕಾರಿ ಘಟನೆ ನಡೆದಿದೆ.
ಜೂನ್​ 25ರಂದು ಈ ಘಟನೆ ನಡೆದಿದೆ. 28 ವರ್ಷದ ರೂಪಾಲಿ ಸಲಿ ಎಂಬಾಕೆ ಕರೊನಾ ಲಸಿಕೆ ಪಡೆದುಕೊಳ್ಳಲು ಥಾಣೆಯಲ್ಲಿರುವ ಆನಂದ್​ ನಗರ ಲಸಿಕಾ ಕೇಂದ್ರಕ್ಕೆ ತೆರಳಿದ್ದರು. ಕೇಂದ್ರದಲ್ಲಿದ್ದ ಆರೋಗ್ಯ ಕಾರ್ಯಕರ್ತೆಯು ರೂಪಾಲಿ ಅವರಿಗೆ ಒಂದರ ನಂತರ ಒಂದರಂತೆ ಮೂರು ಡೋಸ್​ ಲಸಿಕೆ ನೀಡಿದ್ದು, ಅದನ್ನು ನೋಡಿ ರೂಪಾಲಿ ಗೊಂದಲಕ್ಕೆ ಒಳಗಾಗಿದ್ದಾರೆ. ಒಂದು ಡೋಸ್​ ಲಸಿಕೆ ಪಡೆದುಕೊಂಡ ಬಳಿಕ ಎರಡನೇ ಡೋಸ್​ ಪಡೆಯಲು ಒಂದು ತಿಂಗಳ ಅಂತರವಿರಬೇಕೆಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಒಂದೇ ಬಾರಿ ಮೂರು ಡೋಸ್​ ನೀಡಿದ್ದರಿಂದ ಹೆದರಿರುವ ರೂಪಾಲಿ ನಡೆದ ಘಟನೆಯನ್ನು ಗಂಡನ ಮುಂದೆ ಹೇಳಿಕೊಂಡಿದ್ದಾರೆ. ತಾನೂ ಸತ್ತು ಹೋಗುತ್ತೇನೋ ಎಂದು ತುಂಬಾ ಬೆದರಿದ್ದರು. ಬಳಿಕ ಆಕೆಯ ಪತಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಇದೊಂದು ಲಸಿಕಾ ಕೇಂದ್ರದ ಸಿಬ್ಬಂದಿಯಿಂದಾಗಿರುವ ನಿರ್ಲಕ್ಷ್ಯ. ಮಹಿಳೆಗೆ ಲಸಿಕಾ ಪ್ರಕ್ರಿಯೆಯ ಬಗ್ಗೆ ಅರಿವಿರಲಿಲ್ಲ ಮತ್ತು ಆ ಸಮಯದಲ್ಲಿ ಡೋಸ್​ ನೀಡುವಾಗ ಆಕೆ ವಿರೋಧಿಸಿಲ್ಲ. ಸದ್ಯ ರೂಪಾಲಿ ಅವರನ್ನ ಹಿರಿಯ ವೈದ್ಯರು ಪರೀಕ್ಷಿಸಿದ್ದಾರೆ ಮತ್ತು ಈಗ ಆಕೆ ಸಂಪೂರ್ಣವಾಗಿ ಉತ್ತಮವಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೂರು ಬಾರಿ ಲಸಿಕೆ ನೀಡಿರುವಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಟಿಎಂಸಿಯ ವೈದ್ಯಕೀಯ ಆರೋಗ್ಯ ಅಧಿಕಾರಿ ಡಾ.ವೈಜಂತಿ ದೇವಗಿಕರ್ ನಿರಾಕರಿಸಿದರೆ, ಮೂರು ಬಾರಿ ಲಸಿಕೆ ನೀಡಿರುವುದಾಗಿ ಥಾಣೆ ಮೇಯರ್ ಸುದ್ದಿಗಾರರಿಗೆ ದೃಢಪಡಿಸಿದರು.
ಇದೇ ಮೊದಲ ಬಾರಿಗೆ ಥಾಣೆಯಲ್ಲಿ ಇಂತಹ ಘಟನೆ ನಡೆದಿದೆ. ಈ ಪ್ರಮಾದವನ್ನು ಮುಚ್ಚಿಹಾಕಲು ಆರೋಗ್ಯ ಸಂಸ್ಥೆ ಯತ್ನಿಸುತ್ತಿದೆ ಎಂಬುದು ಸುಳ್ಳು. ಈ ಘಟನೆಯ ಬಗ್ಗೆ ನಾನೇ ರಾಜ್ಯ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದೇನೆ ಮತ್ತು ನಾನು ವೈದ್ಯರನ್ನು ಸಹ ಖಂಡಿಸಿದ್ದೇನೆ. ನಾನು ನೇರವಾಗಿ ಮಹಿಳೆಯ ಪತಿಯೊಂದಿಗೆ ಮಾತನಾಡಿದ್ದೇನೆ. ಆದ್ದರಿಂದ ಈ ಘಟನೆಯನ್ನು ನಿರ್ಲಕ್ಷಿಸಲಾಗದು ಎಂದು ನಾಯಕ ಮನೋಹರ್ ಡುಂಬಾರೆ ಹೇಳಿದರು. ನಾಗರಿಕ ಸಂಸ್ಥೆಯ ಅಧಿಕಾರಿಗಳೀಗ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಭರವಸೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!