News Kannada
Tuesday, December 06 2022

ಮಧ್ಯ ಪ್ರದೇಶ

ಪ್ರಿಯತಮೆ ಮೇಲಿನ ಬೇಸರಕ್ಕೆ ಆಕೆಯ ಕುಟುಂಬದ ಐವರನ್ನೂ ಕೊಲೆಗೈದ ಪಾಪಿ

Photo Credit :

ಭೋಪಾಲ್: ಪ್ರಿಯತಮೆಯಿಂದಾಗಿ ಸಾಕಷ್ಟು ಬೇಸರಗೊಂಡಿದ್ದ ವ್ಯಕ್ತಿಯೊಬ್ಬ ಒಂದೇ ಕುಟುಂಬದ ಐವರನ್ನು ಕೊಲೆ ಮಾಡಿ ಜಮೀನಿನಲ್ಲಿ ಹೂತಿಟ್ಟಿರುವ ಘಟನೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಮಮತಾ (45), ರೂಪಾಲಿ (21), ದಿವ್ಯಾ (14) ಪೂಜಾ (15) ಹಾಗೂ ಪವನ್ ಎಂದು ಗುರುತಿಸಲಾಗಿದೆ. ಈ ಐವರು ಮೇ 13ರಿಂದ ಕಾಣೆಯಾಗಿದ್ದಾಗಿ ಪೊಲೀಸ್​ ದೂರು ದಾಖಲಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಸುರೇಂದ್ರ ಹೆಸರಿನ ವ್ಯಕ್ತಿಯ ಜಮೀನಿನಲ್ಲಿ ಐದು ಮೃತದೇಹಗಳು ಸಿಕ್ಕಿವೆ. ಜಮೀನಿನಲ್ಲಿ ಗುಂಡಿ ತೋಡಿ ಸುಮಾರು 10 ಅಡಿ ಕೆಳಗೆ ಹೆಣಗಳನ್ನು ಹೂತಿಟ್ಟಿದ್ದು, ಅದನ್ನು ಪೊಲೀಸರು ಹೊರ ತೆಗೆಸಿದ್ದಾರೆ.
ಸುರೇಂದ್ರ ಯುವತಿಯೊಬ್ಬಳನ್ನು ಪ್ರೀತಿಸಿದ್ದು, ಆಕೆಯೊಂದಿಗೆ ಯಾವಾಗಲೂ ಜಗಳವಾಗುತ್ತಿತ್ತಂತೆ. ಅದೇ ಹಿನ್ನೆಲೆಯಲ್ಲಿ ಸಾಕಷ್ಟು ಬೇಸರಗೊಂಡಿದ್ದ ಆತ ಕೆಲ ಸ್ನೇಹಿತರ ಜತೆ ಸೇರಿಕೊಂಡು ಈ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆತ ಪ್ರೀತಿಸಿದ್ದು ಮೃತ ರೂಪಾಲಿಯನ್ನೇ ಎನ್ನುವ ಮಾತುಗಳು ಕೇಳಿಬಂದಿವೆ. ಆದರೆ ಒಂದೇ ಕುಟುಂಬದ ಐವರನ್ನು ಕೊಲೆ ಮಾಡುವುದಕ್ಕೆ ನಿಖರ ಕಾರಣ ಏನೂ ಎನ್ನುವುದು ಇನ್ನೂ ತಿಳಿದುಬಂದಿಲ್ಲ.

See also  ಪಟಾಕಿ ನಿಷೇಧ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ: ಸುಪ್ರೀಂ ಕೋರ್ಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು