News Kannada
Wednesday, December 07 2022

ದೇಶ

ಪತ್ನಿಯ ಇಚ್ಛೆ ವಿರುದ್ಧ ಲೈಂಗಿಕ ಕ್ರಿಯೆ ನಡೆಸಿದರೆ ವೈವಾಹಿಕ ಅತ್ಯಾಚಾರ: ಕೇರಳ ಹೈಕೋರ್ಟ್‌

Photo Credit :

ಕೊಚ್ಚಿ: ಪತ್ನಿಯ ದೇಹ ಪತಿಗಾಗಿಯೇ ಮೀಸಲಾಗಿದೆ ಎಂದು ತಿಳಿದುಕೊಂಡು ಆಕೆಯ ಇಚ್ಛೆಯ ವಿರುದ್ಧ ಲೈಂಗಿಕ ಕ್ರಿಯೆ ನಡೆಸುವುದು ವೈವಾಹಿಕ ಅತ್ಯಾಚಾರವಾಗುತ್ತದೆ ಎಂದು ಕೇರಳ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ವಿವಾಹ ಮತ್ತು ವಿಚ್ಛೇದನವು ಜಾತ್ಯತೀತ ಕಾನೂನು ವ್ಯಾಪ್ತಿಯಲ್ಲೇ ಇರ ಬೇಕು ಎಂದು ನ್ಯಾಯಮೂರ್ತಿಗಳಾದ ಎ. ಮುಹಮ್ಮದ್‌ ಮುಸ್ತಾಖ್‌ ಮತ್ತು ಕೌಸರ್‌ ಎಡಪ್ಪಗಾಥ್‌ ಅವರನ್ನು ಒಳಗೊಂಡ ಪೀಠವು ಅಭಿಪ್ರಾಯಪಟ್ಟಿದೆ.

ವಿವಾಹದ ಸಂದರ್ಭದಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಸಮಾನರು ಎಂದು ಪರಿಗಣಿಸಲಾಗುತ್ತದೆ. ಪತ್ನಿಗಿಂತ ತಾನು ಹೆಚ್ಚು ಶ್ರೇಷ್ಠ ಎಂದು ಪತಿ ಭಾವಿಸಿಕೊಳ್ಳಬಾರದು. ಇದು ಆಕೆಯ ದೇಹವಾಗಿರಬಹುದು ಅಥವಾ ವೈಯಕ್ತಿಕ ಸ್ಥಾನಮಾನಕ್ಕೆ ಸಂಬಂಧಪಟ್ಟದ್ದಾಗಿರಬಹುದು ಎಂದು ಪೀಠವು ಹೇಳಿದೆ.

ವಿಚ್ಛೇದನ ನೀಡಿದ ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ವ್ಯಕ್ತಿ ಯೊಬ್ಬರು ಸಲ್ಲಿಸಿದ್ದ ಎರಡು ಅರ್ಜಿಗಳನ್ನು ತಿರಸ್ಕರಿಸಿದ ನ್ಯಾಯಾಲಯ, ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

See also  ಭಾರತದಲ್ಲಿ ಆರು ವರ್ಷಕ್ಕಿಂತ ಮೇಲ್ಪಟ್ಟ 67.6% ರಷ್ಟು ಜನರಿಗೆ ಕರೋನ ವೈರಸ್‌!: ಐಸಿಎಂಆರ್ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು