ಗುರುಗ್ರಾಮ್ : ಆಟೋದಲ್ಲಿ ಮನೆಗೆ ಹೋಗುತ್ತಿದ್ದಾಗ ಮಹಿಳೆಯ ಮೇಲೆ ಆಟೋ ಚಾಲಕ ಹಾಗೂ ಆತನ ಸಹಚರರಿಂದ ಸಾಮೂಹಿಕ ಅತ್ಯಾಚಾರಕ್ಕೋಳಗಾಗಿದ್ದಾಳೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ, ಪಾಲಂ ವಿಹಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಾಧದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಇನ್ನೊಬ್ಬ ಆರೂಪಿಯನ್ನು ಹಿಡಿಯಲು ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯು ಮೂಲತಃ ಉತ್ತರಪ್ರದೇಶದ ಶಹಜಹಾನ್ಪುರದವಳಾಗಿದ್ದು, ತಾನು ಗುರುಗ್ರಾಮದ ಪಾಲಂ ವಿಹಾರ್ ಪ್ರದೇಶದಲ್ಲಿ ವಾಸಿಸುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. . ಭಾನುವಾರ, ಅವಳು ತನ್ನ ಸ್ನೇಹಿತನನ್ನು ಭೇಟಿಯಾಗಲು ಜರ್ಸಾ ಗ್ರಾಮಕ್ಕೆ ಹೋಗಿದ್ದಳು ಮತ್ತು ಅಲ್ಲಿಂದ ಸಂಜೆ ತಡವಾಗಿ ನಗರ ಬಸ್ ನಿಲ್ದಾಣವನ್ನು ತಲುಪಿದಳು ಮತ್ತು ಮನೆಗೆ ಮರಳಲು ಶೇರಿಂಗ್ ಆಟೋ ಹತ್ತಿದಳು ಆಗ ಚಾಲಕ ಸೇರಿದಂತೆ ಇನ್ನಿಬ್ಬರು ಆಟೋದಲ್ಲಿ ಕುಳಿತಿದ್ದರು.
ಅವಳು ದುಂಡಾಹೇರಾ ಗ್ರಾಮದ ಬಳಿ ಬಂದಾಗ, ಒಬ್ಬ ಆರೋಪಿಯು ತನ್ನ ಸ್ನೇಹಿತನಿಗೆ ಕರೆ ಮಾಡಿದನು. ಇದಾದ ನಂತರ, ಮೂವರು ಅವಳನ್ನು ಇಟ್ಟುಕೊಂಡು ನಿರ್ಜನ ಸ್ಥಳಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದರು ಮತ್ತು ಆಕೆ ಯಾರಿಗಾದರೂ ವಿಷಯ ಬಹಿರಂಗಪಡಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು ಎಂದು ಸಂತ್ರಸ್ತೆ ಹೇಳಿದ್ದಾಳೆ
ಇದರ ಅನ್ವಯ ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಸಾಮೂಹಿಕ ಅತ್ಯಾಚಾರದ ಪ್ರಕರಣವನ್ನು ಪಾಲಂ ವಿಹಾರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.