ಚೆನ್ನೈ, ; ಕರಾವಳಿ ಗಸ್ತು ನೌಕೆ ’ವಿಗ್ರಹ’ ಕಾರ್ಯಾಚರಣೆಗೆ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಇಂದು ಚಾಲನೆ ನೀಡಿದರು.
ಚೆನ್ನೈನಲ್ಲಿ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಅವರು ಸ್ಥಳಿಯವಾಗಿ ನಿರ್ಮಿಸಿರುವ ಕರಾವಳಿ ಗಸ್ತು ನೌಕೆ ವಿಗ್ರಹವನ್ನು ಕಾರ್ಯಾಚರಣೆಗೆ ನಿಯೋಜಿಸುವ ಮೂಲಕ ಈ ನೌಕೆ ದೇಶದ ಕರಾವಳಿ ಗಡಿಗಳ ಯಶಸ್ವಿ ಕಾವಲುಗಾರನಾಗಲಿದೆ ಎಂದು ನಂಬಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.ವಿಗ್ರಹಪದ ನಮ್ಮ ಪಠ್ಯಗಳಲ್ಲಿ ಸುಂದರ ವ್ಯಾಖ್ಯಾನಗಳನ್ನು ಹೊಂದಿದೆ. ಯಾವುದೇ ರೀತಿಯಿಂದ ಬಂಧನದಿಂದ ಮುಕ್ತ ಎನ್ನುವ ಅರ್ಥವನ್ನು ನೀಡಲಿದೆ. ಮತ್ತೊಂದೆಡೆ ನಿರ್ದಿಷ್ಟ ಎನ್ನುವ ಅರ್ಥ ನೀಡಲಾಗಿದೆ ಎಂದೂ ರಕ್ಷಣಾ ಸಚಿವ ಸಿಂಗ್ ಹೇಳಿದರು.
ಈ ಕರಾವಳಿ ಗಸ್ತು ನೌಕೆಯಲ್ಲಿ ೯೮ ಮೀ. ಆಪ್ಶೋರ್ ಪೆಟ್ರೋಲ್ ಹಡಗುಗಳು, ೧೧ ಅಧಿಕಾರಿಗಳು, ೧೧೦ ನಾವಿಕರನ್ನು ನಿಯೋಜಿಸಲಾಗಿದೆ ಲಾರ್ಸೊ ಅಂಡ್ ಟುಬ್ರೋ ಶಿಪ್ ನಿರ್ಮಾಣ ಸಂಸ್ಥೆ ಈ ನೌಕೆಯನ್ನು ವಿನ್ಯಾಸಗೊಳಿಸಿ ನಿರ್ಮಿಸಿದೆ. ಇದರಿಂದ ಹಡಗು ಸಂಪೂರ್ಣವಾಗಿ ದೇಶೀಯ ಎನ್ನಲಾಗಿದೆ.ಈಗಾಗಲೇ ೬ ಕರಾವಳಿ ಗಸ್ತು ನೌಕೆಗಳಾದ ವಿಕ್ರಂ, ವಿಜಯ್,ವೀರ್, ವರಹಾ, ವರದ್ ಮತ್ತು ಏಳನೆಯದಾಗಿ ವಜ್ರ ಕಾರ್ಯಾಚರಣೆ ಆರಂಭಿಸಿದೆ.
ಈ ಕರಾವಳಿ ಗಸ್ತು ನೌಕೆಯಲ್ಲಿ ಸುಧಾರಿತ ತಂತ್ರಜ್ಞಾನದ ರಾಡಾರ್‌ಗಳು, ಸಂವಹನ ಸಾಧನಗಳು, ಸಂವೇದಕಗಳು, ಉಷ್ಣ ವಲಯದಲ್ಲಿ ಸಮುದ್ರದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಯಂತ್ರಗಳನ್ನು ಅಳವಡಿಸಲಾಗಿದೆ. ಹಡಗಿನಲ್ಲಿ ೪೦/೬೦ ಬೋಫೋರ್ಸ್ ಗನ್‌ಗಳನ್ನು ಅಳವಡಿಸಲಾಗಿದ್ದು, ೧೨.೭ ಸ್ಟೆಬಿಲೈಜ್ಡ್ ರಿಮೋಟ್ ಕಂಟ್ರೋಲ್, ಫೈರ್ ಕಂಟ್ರೋಲ್ ವ್ಯವಸ್ಥೆ ಅಳವಡಿಸಲಾಗಿದೆ.
ಈ ನೌಕೆ ವಿಗ್ರಹ ಕಾರ್ಯಾಚರಣೆಯಿಂದ ಭಾರತದ ಕರಾವಳಿ ರಕ್ಷಣಾ ಸಾಮರ್ಥ್ಯದಲ್ಲಿ ಗಮನಾರ್ಹ ಸುಧಾರಣೆ ಜತೆಗೆ ಸ್ವಾವಲಂಬನೆ ಬಿಂಬಿಸಲಿದೆ. ಸಾಧಾರಣವಾದ ೫ ರಿಂದ ೭ ಸಣ್ಣ ದೋಣಿಗಳೊಂದಿಗೆ ಆರಂಭವಾದ ಭಾರತೀಯ ಕೋಸ್ಟ್‌ಗಾರ್ಡ್ ಬೆಳವಣಿಗೆ ಪ್ರಮಾಣ ಇಂದು ೨೦ ಸಾವಿರಕ್ಕೂ ಅಧಿಕ ಸಕ್ರಿಯ ಸಿಬ್ಬಂದಿ, ೧೫೦ ಹಡಗುಗಳು, ೬೫ಕ್ಕಿಂತಲೂ ಹೆಚ್ಚು ವಿಮಾನಗಳನ್ನು ಹೊಂದಿದೆ.
ಜಾಗತಿಕ ಭದ್ರತಾ ಕಾರಣಗಳು, ಗಡಿ ವಿವಾದಗಳು ಮತ್ತು ಕಡಲ ಪ್ರಾಬಲ್ಯದಿಂದಾಗಿ ಪ್ರಪಂಚದಾದ್ಯಂತ ದೇಶಗಳು ತಮ್ಮ ಮಿಲಿಟರ್ ಶಕ್ತಿಯನ್ನು ಆಧೂನೀಕರಿಸುವತ್ತ ಸಾಗುತ್ತಿವೆ. ಈ ನಿಟ್ಟಿನಲ್ಲಿ ಸೇನಾಸಲಕರಣೆಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಸಚಿವ ಸಿಂಗ್ ಹೇಳಿದ್ದಾರೆ.
ಕರಾವಳಿ ಗಸ್ತು ನೌಕೆ ’ವಿಗ್ರಹಕ್ಕೆ’ ಸಿಂಗ್ ಚಾಲನೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.