NewsKarnataka
Wednesday, September 15 2021

ದೇಶ

ಲಸಿಕೆ ವಿಫಲವಾಗಿದೆ ಸರ್ಕಾರವನ್ನು ದೇಶವಿರೋಧಿ ಎನ್ನುತ್ತೀರಾ ಮಾಜಿ ಆರ್ ಬಿ ಐ ಗವರ್ನರ್ ರಘುರಾಮ್ ರಾಜನ್

ಹೊಸದಿಲ್ಲಿ: ತೆರಿಗೆ ಪಾವತಿ ವೆಬ್‌ಸೈಟ್‌ಗಳಲ್ಲಿನ ಕೆಲವು ದೋಷಗಳನ್ನು ಸರಿಪಡಿಸಲು ಸಾಧ್ಯವಾಗದ ಐಟಿ ಸಂಸ್ಥೆ ಇನ್ಫೋಸಿಸ್ ಅನ್ನು ಆರೆಸ್ಸೆಸ್ ಮುಖವಾಣಿ ವಾರ ಪತ್ರಿಕೆ ‘ಪಾಂಚಜನ್ಯ’ದಲ್ಲಿ ದೇಶ ವಿರೋಧಿ ಎಂದು ಟೀಕಿಸಿರುವ ಲೇಖನದ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ ಆರ್ ಬಿ‌ ಐ ಮಾಜಿ‌ ಗವರ್ನರ್ ‌ಪ್ರಶ್ನಿಸಿದ್ದಾರೆ.
ಕೋವಿಡ್ ಲಸಿಕೆಯಲ್ಲಿನ ಆರಂಭದ ಕಳಪೆ ಸಾಧನೆಗಳ ಕಾರಣಕ್ಕಾಗಿ ಕೇಂದ್ರ ಸರ್ಕಾರವನ್ನು ದೇಶ ವಿರೋಧಿ ಎಂಬಂತೆ ವ್ಯಾಖ್ಯಾನಿಸಲು ಆಗುತ್ತದೆಯೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ತೆರಿಗೆ ಪಾವತಿ ವೆಬ್‌ಸೈಟ್‌ಗಳಲ್ಲಿನ ಕೆಲವು ದೋಷಗಳನ್ನು ಸರಿಪಡಿಸಲು ಸಾಧ್ಯವಾಗದ ಐಟಿ ಸಂಸ್ಥೆ ಇನ್ಫೋಸಿಸ್ ಅನ್ನು ಆರೆಸ್ಸೆಸ್ ಮುಖವಾಣಿ ವಾರ ಪತ್ರಿಕೆ ‘ಪಾಂಚಜನ್ಯ’ದಲ್ಲಿ ದೇಶ ವಿರೋಧಿ ಎಂದು ಟೀಕಿಸಿರುವ ಲೇಖನದ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಇದು ಸಂಪೂರ್ಣ ನಿರರ್ಥಕ ಎಂದು ನನಗೆ ಅನಿಸುತ್ತದೆ. ಆರಂಭದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ನೀಡುವಲ್ಲಿ ವಿಫಲವಾದ ಸರ್ಕಾರವನ್ನು ನೀವು ದೇಶ ವಿರೋಧಿ ಎಂದು ಆರೋಪಿಸುತ್ತೀರಾ? ಅದು ಒಂದು ಪ್ರಮಾದ ಎಂದು ಹೇಳುತ್ತೀರಿ. ಮತ್ತೆ ಜನರು ತಪ್ಪುಗಳನ್ನು ಮಾಡುತ್ತಾರೆ’ ಎಂದು ಅವರು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದ ಸಂದರ್ಭವನ್ನು ಉದಾಹರಣೆಯಾಗಿ ನೀಡಿದರು.

‘ದೇಶ ವಿರೋಧಿ ಇನ್ಫೋಸಿಸ್’ ಲೇಖನ: ಇದು ನಮ್ಮ ಅಭಿಪ್ರಾಯ ಅಲ್ಲ ಎಂದ ಆರೆಸ್ಸೆಸ್

‘ಜಿಎಸ್‌ಟಿ ಅನುಷ್ಠಾನವು ಅತ್ಯದ್ಭುತವಾಗಿತ್ತು ಎಂದು ನನಗೆ ಅನಿಸಿಲ್ಲ. ಅದನ್ನು ಇನ್ನೂ ಉತ್ತಮವಾಗಿ ಜಾರಿಗೊಳಿಸಬಹುದಾಗಿತ್ತು. ಆದರೆ ಆ ತಪ್ಪುಗಳಿಂದ ಕಲಿಯಬೇಕು ಹಾಗೂ ನಿಮ್ಮದೇ ಪೂರ್ವಗ್ರಹಗಳೊಂದಿಗೆ ಬೆರೆಸಲು ಅದನ್ನು ಬಳಸಬೇಡಿ’ ಎಂದು ರಘುರಾಮ್ ರಾಜನ್ ಹೇಳಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಭಾರತದ ಕಾರ್ಖಾನೆ ವಿಭಾಗದ ಫಲಿತಾಂಶದಲ್ಲಿನ ಇತ್ತೀಚಿನ ಮರುಚೇತರಿಕೆಯು ಮಹತ್ತರವಾಗಿದೆ ಎಂದು ಪರಿಗಣಿಸಬಾರದು. ಕೆಳಮಟ್ಟದ ಸಂಖ್ಯೆಯ ಆಧಾರದಲ್ಲಿ ಈ ಲೆಕ್ಕಾಚಾರ ಮಾಡಲಾಗಿದೆ. ಆದರೆ ಕೈಗಾರಿಕಾ ವಲಯದಲ್ಲಿನ ಚೇತರಿಕೆ ಗಮನಾರ್ಹವಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ‘ಕೈಗಾರಿಕೆ ಕ್ಷೇತ್ರದಲ್ಲಿ ನಿಜಕ್ಕೂ ಗಮನಾರ್ಹ ಚೇತರಿಕೆ ಇದೆ. ಆದರೆ ಇದು ಕೂಡ ಶ್ರೀಮಂತ, ಮೇಲ್ಮಧ್ಯಮ ವರ್ಗದ ಜನರನ್ನು ಉದ್ದೇಶಿಸಿದ ಸರಕುಗಳು ಹಾಗೂ ಬಡವರನ್ನು ಗುರಿಯಾಗಿರಿಸಿದ ಸರಕುಗಳ ನಡುವೆ ವ್ಯತ್ಯಾಸವನ್ನು ತೋರಿಸುತ್ತದೆ’ ಎಂದಿದ್ದಾರೆ.

ಇದಕ್ಕೆ ರಾಜನ್ ಅವರು ನಾಲ್ಕು ಚಕ್ರದ ವಾಹನಗಳು ಹಾಗೂ ಮಾರಾಟದಲ್ಲಿ ಕುಸಿತ ಕಂಡಿರುವ ದ್ವಿಚಕ್ರ ವಾಹನ ಉದ್ಯಮಗಳನ್ನು ಉದಾಹರಣೆಯಾಗಿ ನೀಡಿದರು. ಸಣ್ಣ ಕಂಪೆನಿಗಳಿಗೆ ಹೋಲಿಸಿದರೆ, ದೊಡ್ಡ ಕಂಪೆನಿಗಳು ಗಣನೀಯವಾಗಿ ಲಾಭದ ಬೆಳವಣಿಗೆ ಕಾಣುತ್ತಿವೆ. ಷೇರು ಮಾರುಕಟ್ಟೆ ಉತ್ತಮವಾಗಿ ಸಾಗುತ್ತಿರುವುದಕ್ಕೆ ಇದೂ ಒಂದು ಕಾರಣ. ಇದರಿಂದಾಗಿಯೇ ತೆರಿಗೆ ಸಂಗ್ರಹ ಹೆಚ್ಚುತ್ತಿದೆ. ಜಿಎಸ್‌ಟಿ ಸಂಗ್ರಹವು ಆಗಸ್ಟ್ ತಿಂಗಳಲ್ಲಿ 1.12 ಲಕ್ಷ ಕೋಟಿಗೆ ಶೇ 30ರಷ್ಟು ಏರಿಕೆಯಾಗಿದೆ ಎಂದು ವಿವರಿಸಿದ್ದಾರೆ.

‘ನಾವು ಆರ್ಥಿಕತೆಯನ್ನು ಬಲವಂತವಾಗಿ ಕ್ರಮಬದ್ಧಗೊಳಿಸುವಿಕೆಯನ್ನು ಕಾಣುತ್ತಿದ್ದೇವೆ. ಇತರೆ ದೇಶಗಳು ಮಾಡುವ ಮಟ್ಟಿಗೆ ನಾವು ನಮ್ಮ ಸಣ್ಣ ಹಾಗೂ ಮಧ್ಯಮ ಉದ್ಯಮಗಳನ್ನು ಬೆಂಬಲಿಸುತ್ತಿಲ್ಲ. ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹೆಚ್ಚು ಪ್ರಬಲವಾಗುವಂತೆ ಪರಿಸ್ಥಿತಿಯನ್ನು ಕ್ರಮಬದ್ಧಗೊಳಿಸಬೇಕಿದೆ. ಆದರೆ ಅದನ್ನು ನಾವು ಕಾಣಲು ಸಾಧ್ಯ ಎನಿಸುತ್ತಿಲ್ಲ’ ಎಂದಿದ್ದಾರೆ.

ರಾಜ್ಯ ಸರ್ಕಾರಗಳ ಹಣಕಾಸು ಸ್ಥಿತಿ ಬಹಳ ಕೆಟ್ಟದಾಗಿವೆ. ಭಾರತವು ಕೇಂದ್ರದಿಂದಲೇ ನಡೆಯುವಂತೆ ಸನ್ನಿವೇಶ ಸೃಷ್ಟಿಸುತ್ತಿದೆ. ಇದು ಕೇಂದ್ರದಿಂದ ಮಾತ್ರವಲ್ಲದೆ, ‘ಕೇಂದ್ರದೊಳಗಿನ ಕೇಂದ್ರದಿಂದ’ ನಡೆಯುತ್ತಿದೆ. ಈ ರೀತಿಯ ಕೇಂದ್ರೀಕರಣವು ನಮಗೆ ಹಿನ್ನಡೆಯುಂಟುಮಾಡುತ್ತಿದೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!