NewsKarnataka
Friday, November 26 2021

ದೇಶ

2022ರೊಳಗೆ ದೇಶದಲ್ಲಿ ಮೆಟ್ರೋ ಮಾರ್ಗ 900 ಕಿ.ಮೀ.ಗೆ ಏರಿಕೆ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

ದೇಶದ ವಿವಿಧ ನಗರಗಳಲ್ಲಿ ಪ್ರಸ್ತುತ 740 ಕಿ.ಮೀ ಮೆಟ್ರೋ ಸಂಚರಿಸುತ್ತಿದ್ದು, 2022ರ ವೇಳೆಗೆ ಈ ಮಾರ್ಗವನ್ನು 900 ಕಿ.ಮೀ.ಗೆ ವಿಸ್ತರಿಸಲಾಗುತ್ತದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ದೆಹಲಿ ಗ್ರೇ ಲೈನ್ ಮೆಟ್ರೋ ಉದ್ಘಾಟನೆ ವೇಳೆ ಮಾತನಾಡಿದ ಅವರು, ದೇಶದಲ್ಲಿ ಮೆಟ್ರೋ ಕಾಮಗಾರಿ ವೇಗ ಪಡೆದುಕೊಳ್ಳುತ್ತಿದ್ದು, ದೇಶದ ವಿವಿಧ ನಗರಗಳಲ್ಲಿ ಇನ್ನೂ 1 ಸಾವಿರ ಕಿ.ಮೀ. ಮೆಟ್ರೋ ಮಾರ್ಗಗಳು ನಿರ್ಮಾಣ ಹಂತದಲ್ಲಿದೆ.

ಮುಂದಿನ ವರ್ಷಗಳಲ್ಲಿ ದೇಶದಲ್ಲಿ ಒಟ್ಟು 2 ಸಾವಿರ ಕಿ.ಮೀ. ಮೆಟ್ರೋ ಸೇವೆ ಒದಗಿಸಲಾಗುತ್ತದೆ ಎಂದರು.
ಕೋವಿಡ್ ಸಮಯದಲ್ಲೂ ರಾಷ್ಟ್ರರಾಜಧಾನಿಯಲ್ಲಿ ಮೆಟ್ರೋ ಕಾಮಗಾರಿ ನಿರಂತರವಾಗಿ ನಡೆದಿರುವುದು ಶ್ಲಾಘನೀಯ ವಿಚಾರವಾಗಿದ್ದು, ದೆಹಲಿ ವಿಶ್ವದರ್ಜೆಯ ನಗರವಾಗುವ ಎಲ್ಲಾ ಸಾಮರ್ಥ್ಯವಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!