NewsKarnataka
Tuesday, December 07 2021

ದೇಶ

ಹೊಸದಾಗಿ ಸ್ಥಾಪನೆಯಾಗಿದ್ದ ಉಗ್ರಗಾಮಿ ಸಂಘಟನೆಯ 11 ಸದಸ್ಯರ ಬಂಧನ

ಮೇಘಾಲಯ: ಹೊಸದಾಗಿ ಸ್ಥಾಪನೆಯಾಗಿದ್ದ ಉಗ್ರಗಾಮಿ ಸಂಘಟನೆಯ 11 ಸದಸ್ಯರನ್ನು ಮೇಘಾಲಯದ ಪೊಲೀಸರು ವೆಸ್ಟ್‌ ಗಾರೊ ಹಿಲ್ಸ್‌ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

ಅಚಿಕ್ ನ್ಯಾಷನಲ್ ಸೋಷಿಯಲಿಸ್ಟ್‌ ಕೌನ್ಸಿಲ್‌ ಹೆಸರಿನ ಈ ಸಂಘಟನೆಯ ಸ್ವಘೋಷಿತ ನಾಯಕ ಚೆಕಂ ಸಂಗ್ಮಾ ಎಂಬಾತನನ್ನು ಜಿಲ್ಲೆಯ ಹವಾಖಾನಾ ಎಂಬಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಸೆ.25ರಂದು ಈತನನ್ನು ಬಂಧಿಸಲಾಗಿತ್ತು. ತನಿಖೆಯಲ್ಲಿ ತಾನು ಸಮಾನ ಮನಸ್ಕರ 30 ಜನರ ಜೊತೆಗೂಡಿ ಹೊಸ ಸಂಘಟನೆ ಸ್ಥಾಪಿಸಿರುವುದಾಗಿ ತಿಳಿಸಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ ಸಿಂಗ್ ಹೇಳಿಕೆ ನೀಡಿದ್ದಾರೆ.

ಮಾಹಿತಿ ಆಧರಿಸಿ ಇತರರ ಬಂಧಿಸಲಾಯಿತು. ಇವರಿಂದ ಎರಡು ಗನ್‌, ಒಂದು ಪಿಸ್ತೂಲ್ ಜಪ್ತಿ ಮಾಡಲಾಗಿದೆ. ಅಪಹರಣ, ಸುಲಿಗೆ ಇತ್ಯಾದಿ ಕೃತ್ಯ ಎಸಗಲು ಹೊಂಚುಹಾಕಿದ್ದು, ಪೂರಕವಾಗಿ ಶಸ್ತ್ರಾಸ್ತ್ರಗಳ ಸಂಗ್ರಹದಲ್ಲಿ ತೊಡಗಿತ್ತು ಎಂದು ತಿಳಿಸಿದರು.

ಕಳೆದ ಕೆಲವು ದಿನಗಳಲ್ಲಿ 10 ಮಂದಿಯನ್ನು ಬಂಧಿಸಲಾಗಿದೆ ಮತ್ತು ಅವರ ಬಳಿಯಿಂದ ಎರಡು ಬಂದೂಕುಗಳು ಮತ್ತು ಒಂದು ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಹೇಳಿದರು.

ಬಂಧಿತರಲ್ಲಿ ಅನೇಕರು ಈ ಹಿಂದೆ ಗರೋ ಹಿಲ್ಸ್ ಬೆಟ್ಟ ಪ್ರದೇಶದಲ್ಲಿ (ಪಶ್ಚಿಮ ಮೇಘಾಲಯದ ಐದು ಜಿಲ್ಲೆಗಳನ್ನು ಒಳಗೊಂಡಿರುವ) ವಿವಿಧ ಉಗ್ರಗಾಮಿ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದರು ಎಂದು ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!