NewsKarnataka
Wednesday, November 24 2021

ದೇಶ

ಭಾರತಕ್ಕೆ ಬರುವ ವಿದೇಶಿ ಪ್ರಯಾಣಿಕರ ಮೇಲೆ ವಿಧಿಸಲಾಗಿದ್ದ ಕ್ವಾರಂಟೈನ್ ನಿಯಮಗಳು ಇಂದಿನಿಂದ ಸಡಿಲಿಕೆ

ಭಾರತಕ್ಕೆ ಬರುವ ವಿದೇಶಿ ಪ್ರಯಾಣಿಕರ ಮೇಲೆ ವಿಧಿಸಲಾಗಿದ್ದ ಕ್ವಾರಂಟೈನ್ ನಿಯಮಗಳು ಇಂದಿನಿಂದ ಸಡಿಲಿಕೆಯಾಗಲಿದೆ.

ಈ ಮೂಲಕ ವಿದೇಶಿ ಪ್ರಯಾಣಿಕರು ವಿಮಾನ ನಿಲ್ದಾಣಗಳಿಂದ ನೇರವಾಗಿ ಮನೆಗೆ ತೆರಳಬಹುದಾಗಿದೆ. ಹೋಂ ಕ್ವಾರಂಟೈನ್ ನಿಬಂಧನೆಗಳಿಗೂ ಒಳಗಾಗಬೇಕಿಲ್ಲ. ಆದರೆ ಕೋವಿಡ್-19 ಆರ್​ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ತೋರಿಸುವುದು ಕಡ್ಡಾಯವಾಗಿದೆ.

ಕಳೆದ ಫೆಬ್ರವರಿಯ ನಂತರ ಈ ಸಂಬಂಧ ಹೊರಡಿಸಲಾಗಿದ್ದ ಎಲ್ಲ ಆದೇಶಗಳೂ ಇನ್ನು ಅನೂರ್ಜಿತವಾಗಲಿದ್ದು, ಕಳೆದ ಬುಧವಾರ ಕೇಂದ್ರ ಹೊರಡಿಸಿರುವ ಹೊಸ ನಿಯಮಗಳು ಚಾಲ್ತಿಯಲ್ಲಿರಲಿದೆ.

ವಿದೇಶಿ ಪ್ರಯಾಣಿಕರಿಗೆ ಅನ್ವಯವಾಗುವ ನಿಯಮಗಳು..

  • ಕೋವಿಡ್ ಲಸಿಕೆಯ ಒಂದು ಡೋಸ್ ಪಡೆದವರು ಅಥವಾ ಲಸಿಕೆಯೇ ಪಡೆಯದ ವಿದೇಶಿ ಪ್ರಯಾಣಿಕರು ಕೋವಿಡ್ ಪರೀಕ್ಷೆಯ ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ.
  • ಇಂಥವರು ಏಳು ದಿನ ಹೋಂ ಕ್ವಾರಂಟೈನ್​ನಲ್ಲಿದ್ದು, 8ನೇ ದಿನ ಕೋವಿಡ್ ತಪಾಸಣೆ ಮಾಡಿಕೊಳ್ಳಬೇಕು.
  • ವಿಮಾನಯಾನ ಕಂಪನಿಗಳ ಸಿಬ್ಬಂದಿ, ಬಂದರು ಹಾಗೂ ಭೂ ಗಡಿಗಳಲ್ಲಿ ವಿದೇಶಗಳೊಂದಿಗೆ ಸಂಪರ್ಕ ಇರಿಸಿಕೊಳ್ಳುವವರಿಗೂ ಈ ನಿಯಮ ಅನ್ವಯವಾಗಲಿದೆ.
  • ವಿಮಾನ ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡುವಾಗಲೇ ಏರ್ ಸುವಿಧಾ ಪೋರ್ಟಲ್ ಮೂಲಕ ಪ್ರಯಾಣಿಕರು ತಮ್ಮ ಆರ್​ಟಿ-ಪಿಸಿಆರ್ ವರದಿಯನ್ನು ಸಲ್ಲಿಸಬೇಕು.
  • ಪ್ರಯಾಣ ಆರಂಭಿಸುವ 72 ಗಂಟೆಗಳ ಮೊದಲು ಈ ಪರೀಕ್ಷೆ ನಡೆದಿರಬೇಕು.
  • ಸಲ್ಲಿಸಿರುವ ಮಾಹಿತಿ ತಪ್ಪಾಗಿದ್ದರೆ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದು ಎಂಬ ಮುಚ್ಚಳಿಕೆಯನ್ನೂ ಪ್ರಯಾಣಿಕರು ಬರೆದುಕೊಡಬೇಕಾಗುತ್ತದೆ.
  • ಕೋವಿಡ್ ಸೋಂಕಿತರ ಸಂಖ್ಯೆ ತಗ್ಗಿರುವ ದೇಶದಿಂದ ಬರುವವರು 14 ದಿನಗಳ ಕಾಲ ಆರೋಗ್ಯದ ಮೇಲೆ ಸ್ವಯಂ ನಿಗಾ ಇರಿಸಿಕೊಳ್ಳಬೇಕು.
  • ಕೋವಿಡ್ ಲಕ್ಷಣಗಳು ಕಾಣಿಸಿದರೆ ತಕ್ಷಣ ಸ್ವಯಂ ಕ್ವಾರಂಟೈನ್​ಗೆ ಒಳಪಟ್ಟು ಚಿಕಿತ್ಸೆ ಪಡೆದುಕೊಳ್ಳಬೇಕು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!