ಡಿಜಿಪಿ-ಐಜಿಪಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಲಖನೌ ಪ್ರವಾಸದಲ್ಲಿದ್ದಾರೆ. ಈ ವೇಳೆ ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ಮೋದಿ ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಫೋಟೋ ಶೇರ್ ಮಾಡಿ, ನಾಲ್ಕು ಸಾಲು ಕವಿತೆಯನ್ನು ಬರೆದಿದ್ದಾರೆ.
हम निकल पड़े हैं प्रण करके
अपना तन-मन अर्पण करके
जिद है एक सूर्य उगाना है
अम्बर से ऊँचा जाना है
एक भारत नया बनाना है pic.twitter.com/0uH4JDdPJE— Yogi Adityanath (@myogiadityanath) November 21, 2021
ಪ್ರಧಾನಿ ಮೋದಿ ಯೋಗಿ ಆದಿತ್ಯನಾಥ್ ಅವರ ಹೆಗಲ ಮೇಲೆ ಕೈಹಾಕಿಕೊಂಡು ಏನೋ ಮಾತನಾಡುತ್ತಿರುವ ಫೋಟೋ ಇದಾಗಿದೆ. ಈ ಫೋಟೋ ಜತೆಗೆ ನವಭಾರತದ ಕನಸನ್ನು ಕ್ಯಾಪ್ಷನ್ ನಂತೆ ಕೊಟ್ಟಿದ್ದಾರೆ. ಆತ್ಮವನೆ ಜತೆಗಿಟ್ಟು ಹೊರಟಿಹೆವು ನಾವು, ತನು-ಮನಗಳೆಲ್ಲವನೂ ಅರ್ಪಿಸಿಹೆವು ನಾವು, ಹೊಸ ಸೂರ್ಯನೊಬ್ಬನನು ಹೊಳೆಯಿಸುವ ಛಲವಿಹುದು, ಆಕಾಶದಾಚೆಗೂ ಸಾಗುವ ಗುರಿಯಿಹುದು, ಕಟ್ಟಬೇಕಿದೆ ಹೊಸ ಭಾರತವೊಂದನ್ನು ಎಂದು ಯೋಗಿ ಆದಿತ್ಯನಾಥರು ಸುಂದರ ಸಾಲುಗಳನ್ನು ಬರೆದಿದ್ದಾರೆ.