ಭಾರತದ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಆರ್. ಹರಿಕುಮಾರ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ಈ ವೇಳೆ ಅಡ್ಮಿರಲ್ ಹರಿ ಕುಮಾರ್ ತಮ್ಮ ತಾಯಿಯ ಪಾದ ಮುಟ್ಟಿ ನಮಸ್ಕರಿಸಿದ್ದು, ಭಾರತೀಯರ ಗಮನ ಸೆಳೆದಿದೆ.
ನೌಕಾಪಡೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ವೈಸ್ ಅಡ್ಮಿರಲ್ ಆರ್. ಹರಿಕುಮಾರ್ ಬಗ್ಗೆ ನೀವು ತಿಳಿಯಲೇಬೇಕಾದ ಅಂಶಗಳಿವು.
ಸಂಯೋಜಿತ ರಕ್ಷಣಾ ಸಿಬ್ಬಂದಿಗಳ ಪ್ರದಾನ ಕಚೇರಿಯ ಭಾಗವಾಗಿ ಥಿಯೇಟರ್ ಕಮಾಂಡ್ ಗಳನ್ನು ಪ್ರಾರಂಭಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.ಅಡ್ಮಿರಲ್ ಹರಿಕುಮಾರ್ ಅವರು ಸುದೀರ್ಘ 39 ವರ್ಷಗಳ ಕಾಲ ನೌಕಾಪಡೆಯ ವಿವಿಧ ಕಮಾಂಡ್, ಸ್ಟಾಫ್ ಮತ್ತು ನೇಮಕ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಐಎನ್‌ಎಸ್ ನಿಶಾಂಕ್, ಮಿಸೈಲ್ ಕಾರ್ವೆಟ್, ಐಎನ್‌ಎಸ್ ಕೋರಾ ಮತ್ತು ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ಐಎನ್‌ಎಸ್ ರಣವೀರ್ ಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.ನೌಕಾಪಡೆಯ ವಿಮಾನವಾಹಕ ನೌಕೆ ಐಎನ್ ಎಸ್ ವಿರಾಟ್‌ಗೆ ಕಮಾಂಡರ್ ಆಗಿದ್ದರು.ಏ.12 1962ರಲ್ಲಿ ಆರ್. ಹರಿಕುಮಾರ್ ಜನಿಸಿದರು. ಜ.1 1983ರಲ್ಲಿ ನೌಕಾ ಪಡೆಗೆ ಸೇರ್ಪಡೆಗೊಂಡರು.
ವಿದ್ಯಾಭ್ಯಾಸ: ಯುಎಸ್ ನೇವಲ್ ವಾರ್ ಕಾಲೇಜ್, ಆರ್ಮಿ ವಾರ್ ಕಾಲೇಜ್, Mhow ಮತ್ತು ಯುಕೆಯ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್‌ನಲ್ಲಿ ಅಧ್ಯಯನ ಮಾಡಿದ್ದಾರೆ.ಸಾಧನೆ: ಅಡ್ಮಿರಲ್ ಕುಮಾರ್ ಅವರಿಗೆ ಅತಿ ವಿಶಿಷ್ಟ ಸೇವಾ ಪದಕ (AVSM), ವಿಶಿಷ್ಟ ಸೇವಾ ಪದಕ (VSM) ಪಡೆದಿದ್ದಾರೆ. ನ.23 2021ರಂದು ರಾಷ್ಟ್ರಪತಿ ಕೋವಿಂದ್ ಅವರಿಂದ ಪರಮ ವಿಶಿಷ್ಟ ಸೇವಾ ಪದಕ (PVSM) ಪಡೆದಿದ್ದಾರೆ.
WATCH: Vice Admiral R Hari Kumar took blessings from his mother on taking charge as the new Chief of Naval Staff today. @indiannavy
(Video ANI) pic.twitter.com/HzzWowqPlk
— Prasar Bharati News Services पी.बी.एन.एस. (@PBNS_India) November 30, 2021