News Kannada
Sunday, March 26 2023

ದೇಶ

ಒಮಿಕ್ರಾನ್​ ಭಯ: ಜನವರಿ 31ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿರ್ಬಂಧ

Photo Credit :

ದೇಶದಲ್ಲಿ ಆಫ್ರಿಕಾದ ಹೊಸ ರೂಪಾಂತರ ಒಮಿಕ್ರಾನ್​ ಭಯ ಶುರುವಾಗಿದೆ. ಇದೇ ಕಾರಣಕ್ಕಾಗಿ ಮುಂದಿನ ತಿಂಗಳ ಜನವರಿ 31ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟದ ಮೇಲೆ ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ನಿರ್ಬಂಧ ವಿಧಿಸಿದೆ.

ಕಳೆದ ಕೆಲ ದಿನಗಳ ಹಿಂದೆ ಇದೇ ವಿಚಾರವಾಗಿ ಮಾತನಾಡಿದ್ದ ವಿಮಾನಯಾನ ನಾಗರಿಕ ಇಲಾಖೆ, ಡಿಸೆಂಬರ್​​ 15ರಿಂದ ಅಂತಾರಾಷ್ಟ್ರೀಯ ವಿಮಾನ ಸೇನೆ ಪುನಾರಂಭ ಮಾಡುವುದಾಗಿ ತಿಳಿಸಿತ್ತು. ಆದರೆ, ಇದೀಗ ವಿದೇಶಗಳಲ್ಲಿ ಒಮಿಕ್ರಾನ್​​​ ಭೀತಿ ಹೆಚ್ಚಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಹೊರಹಾಕಿದೆ.

ಒಮಿಕ್ರಾನ್​​​ನಿಂದಾಗಿ ಯುಕೆ, ಫ್ರಾನ್ಸ್​, ಜರ್ಮನಿ, ನೆದರ್​​ಲ್ಯಾಂಡ್​, ಫಿನ್​ಲ್ಯಾಂಡ್​, ದಕ್ಷಿಣ ಆಫ್ರಿಕಾ, ಬ್ರೆಜಿಲ್​, ಚೀನಾ, ಮಾರಿಷಸ್, ನ್ಯೂಜಿಲ್ಯಾಂಡ್​, ಸಿಂಗಾಪುರ, ಬಾಂಗ್ಲಾದೇಶ, ಜಿಂಬಾಬ್ವೆ ದೇಶಗಳ ಮೇಲೆ ಈಗಾಗಲೇ ಕೇಂದ್ರ ನಿರ್ಬಂಧ ವಿಧಿಸಿದೆ.

ದೇಶದಲ್ಲಿ ಕೋವಿಡ್​ ಸೋಂಕಿತ ಪ್ರಕರಣ ಕಡಿಮೆಯಾಗಿದ್ದರಿಂದ ಡಿಸೆಂಬರ್​​ 15ರಿಂದ ಯಾವುದೇ ನಿರ್ಬಂಧವಿಲ್ಲದೇ ಅಂತಾರಾಷ್ಟ್ರೀಯ ವಿಮಾನ ಸೇವೆ ಪುನಾರಂಭಿಸುವುದಾಗಿ ಕೇಂದ್ರ ತಿಳಿಸಿತ್ತು. ಇದರ ಬೆನ್ನಲ್ಲೇ ಒಮಿಕ್ರಾನ್​ ಸೋಂಕು ಕಾಣಿಸಿಕೊಂಡಿರುವ ಕಾರಣ ಇದೀಗ ಈ ನಿರ್ಧಾರ ಮುಂದೂಡಿಕೆ ಮಾಡಿದೆ.

See also  ಕರ್ನಾಟಕದಿಂದ ಒಮಿಕ್ರಾನ್ ವರದಿಯಾದ ಮೇಲೆ ತಜ್ಞರ ಜತೆ ಸಿಎಂ ಸಭೆ: 20 ಅಂಶಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು