News Kannada
Thursday, March 23 2023

ದೇಶ

ಎರಡೇ ಗಂಟೆಯಲ್ಲಿ ಒಮಿಕ್ರಾನ್ ಸೋಂಕು ಪತ್ತೆ ಮಾಡುವ ಕಿಟ್ ಅಭಿವೃದ್ಧಿಪಡಿಸಿದ ಐಸಿಎಂಆರ್

Photo Credit :

ಕೋವಿಡ್ ನ ಹೊಸ ರೂಪಾಂತರಿ ತಳಿ ಒಮಿಕ್ರಾನ್ ಸೋಂಕಿನ ಭೀತಿ ಹೆಚ್ಚಾಗುತ್ತಿದ್ದು, ಸೋಂಕಿತ ಪ್ರಕರಣಗಳನ್ನು ಆದಷ್ಟು ಬೇಗ ಪತ್ತೆ ಮಾಡಲು ಸಹಕಾರಿಯಾಗುವಂತಹ ಕಿಟ್ ವೊಂದನ್ನು ಐಸಿಎಂಆರ್ ಅಭಿವೃದ್ಧಿಪಡಿಸಿದೆ.

ಈ ಕಿಟ್ ಅನ್ನು ವಿಜ್ಞಾನಿ ಡಾ. ಬಿಸ್ವಜ್ಯೋತಿ ಬೋರ್ಕಕೋಟಿ ನೇತೃತ್ವದಲ್ಲಿ ಈಶಾನ್ಯ ಪ್ರಾಂತ್ಯದ ಪ್ರದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡ ಸಿದ್ಧಪಡಿಸಿದೆ. ಶಂಕಿತ ವ್ಯಕ್ತಿಯಿಂದ ಸಂಗ್ರಹಿಸಿದ ಮಾದರಿಯಲ್ಲಿ ಒಮಿಕ್ರಾನ್ ಸೋಂಕು ಇರುವುದನ್ನು ಕೇವಲ ಎರಡು ಗಂಟೆಯಲ್ಲಿ ಪತ್ತೆ ಮಾಡಬಹುದಾದ ಯಂತ್ರ ಇದಾಗಿದೆ.

ಈ ಬಗ್ಗೆ ಮಾತನಾಡಿದ ಡಾ. ಬಿಸ್ವಜ್ಯೋತಿ ಅವರು, ಐಸಿಎಂಆರ್ ಹಾಗೂ ಆರ್ ಎಂಅರ್ ಸಿ ತಂಡ ಒಮಿಕ್ರಾನ್ ಪತ್ತೆಗಾಗಿ ಆರ್ಟಿಪಿಸಿಆರ್ ಪರೀಕ್ಷೆಗಾಗಿ ಕಿಟ್ ಅಭಿವೃದ್ಧಿಪಡಿಸಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವವಿರುವ ಜಿಸಿಸಿ ಬಯೋಟೆಕ್ ಸಂಸ್ಥೆ ಈ ಕಿಟ್ ತಯಾರಿಸುತ್ತಿದೆ. ಇದರಲ್ಲಿ ಶೇ.100ರಷ್ಟು ನಿಖರ ಫಲಿತಾಂಶ ಸಿಗಲಿದೆ ಎಂದರು.

ಸದ್ಯ ಕೋವಿಡ್ ಸೋಂಕು ಪತ್ತೆ ಮಾಡಲು 36 ಗಂಟೆಗಳ ಸಮಯಾವಕಾಶ ಬೇಕಾಗಿದ್ದು, ರೂಪಾಂತರಿ ಒಮಿಕ್ರಾನ್ ಸೋಂಕು ಪತ್ತೆ ಮಾಡಲು 4-5 ದಿನಗಳು ಅಗತ್ಯವಿದೆ. ಇಂತಹ ಸನ್ನಿವೇಶದಲ್ಲಿ ಈ ಕಿಟ್ ಸಹಕಾರಿಯಾಗಲಿದೆ ಎಂದರು.

See also  ಪಾಕಿಸ್ತಾನ ನೌಕಾಪಡೆಯಿಂದ ದೋಣಿ ಮೇಲೆ ದಾಳಿ: ಓರ್ವ ಭಾರತೀಯ ಮೀನುಗಾರನ ಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು