ಕೇರಳದಲ್ಲಿ ಹೊಸದಾಗಿ ನಾಲ್ಕು ಒಮಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 161ಕ್ಕೇರಿದಂತಾಗದೆ.
ಕೇಂದ್ರ ಸಚಿವರು ಸೋಮವಾರ ರಾಜ್ಯಸಭೆಯಲ್ಲಿ ಈ ವಿಷಯ ತಿಳಿಸಿದ್ದು, ಒಮಿಕ್ರಾನ್ ಸೋಂಕು ಪ್ರಕರಣ 12 ರಾಜ್ಯಗಳಿಗೆ ವಿಸ್ತರಣೆಗೊಂಡಿದ್ದುಮ, ಇದುವರೆಗೆ 42 ಮಂದಿ ಗುಣಮುಖಿತರಾಗಿದ್ದಾರೆ.
ಕೇರಳದಲ್ಲಿ ಸೋಮವಾರ 4 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 15ಕ್ಕೆ ಜಿಗಿತ ಕಂಡಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸುಮಾರು 50 ಪ್ರಕರಣಗಳು ಕಂಡು ಬಂದಿವೆ ಎಂದು ಸಚಿವರು ತಿಳಿಸಿದ್ದಾರೆ.