News Kannada
Tuesday, December 06 2022

ದೇಶ

ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಪ್ರಶಸ್ತಿ ಸ್ವೀಕಾರ, 125 ವರ್ಷದ ಸ್ವಾಮಿ ಶಿವಾನಂದರು

Photo Credit :

ದೇಶದ ಅತ್ಯುನ್ನತ ಪದ್ಮ ಪ್ರಶಸ್ತಿಗಳನ್ನು ಇಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಪ್ರದಾನ ಮಾಡಿದರು. ಈ ವೇಳೆ ಪ್ರಶಸ್ತಿ ಸ್ವೀಕಾರ ಮಾಡಿರುವ 125 ವರ್ಷದ ಸ್ವಾಮಿ ಶಿವಾನಂದರ ಅವರ ವಿಡಿಯೋ ಎಲ್ಲರ ಮನಸೆಳೆದಿದೆ.

ಪದ್ಮಶ್ರೀ ಪಡೆಯಲು ಬಂದ 125 ವರ್ಷದ ಸ್ವಾಮಿ ಶಿವಾನಂದರ ಅವರು ಪ್ರಧಾನಿ ಮೋದಿ ಅವರ ಕಾಲಿಗೆ ನಮಸ್ಕರಿಸಿದ್ದು ಅಲ್ಲಿ ನೆರೆದಿದ್ದ ಎಲ್ಲರಲ್ಲಿ ಒಮ್ಮೆ ಆಶ್ವರ್ಯ ಮೂಡಿಸಿತು.

125 ವರ್ಷದ ಸ್ವಾಮಿ ಶಿವಾನಂದ ಉತ್ತರ ಪ್ರದೇಶದವರಾಗಿದ್ದು, ಯೋಗದಲ್ಲಿ ಇವರ ಮೇರು ಸಾಧನೆ ಗುರುತಿಸಿ ಮೋದಿ ಸರ್ಕಾರ ಪದ್ಮಶ್ರೀ ಘೋಷಣೆ ಮಾಡಿತ್ತು.

ಇಂದು ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದುಕೊಳ್ಳಲು ಬಂದಿದ್ದ ಅವರು, ಪ್ರಶಸ್ತಿ ಪಡೆದುಕೊಳ್ಳಲು ಅವರ ಹೆಸರು ಘೋಷಣೆ ಮಾಡುತ್ತಿದ್ದಂತೆ ಎದ್ದು ನಿಂತು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ತೆರಳಿ ಅವರಿಗೆ ನಮಸ್ಕಾರ ಮಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಮೋದಿ ಕೂಡಾ ನಮಸ್ಕಾರ ಮಾಡಿದರು. ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರ ಬಳಿ ತೆರಳಿ ಅವರಿಗೆ ನಮಸ್ಕಾರ ಮಾಡಿದ್ದಾರೆ.

See also  ಕಡಿಮೆ ಕೋವಿಡ್ ಲಸಿಕೆ ವ್ಯಾಪ್ತಿ: ನವೆಂಬರ್ 3 ರಂದು 40 ಜಿಲ್ಲೆಗಳ ಡಿಎಂಗಳೊಂದಿಗೆ ಪ್ರಧಾನಿ ಮೋದಿ ಪರಿಶೀಲನಾ ಸಭೆ ನಡೆಯಲಿದೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು