ಹೈದರಾಬಾದ್, ; ನಕಲಿ ನೋಟು ಮುದ್ರಣ ಮಾಡಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ನಗರ ಪೊಲೀಸರು ಪತ್ತೆಹಚ್ಚಿ ಐವರನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳಿಂದ ೧೬ ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟುಗಳು ಸೇರಿದಂತೆ ಒಂದು ಲ್ಯಾಪ್‌ಟಾಪ್ ವಶ ಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ತಿಳಿಸಿದ್ದಾರೆ.
ಹೈದರಾಬಾದ್ ನ ಸಂತೋಷ್ ಕುಮಾರ್ (೨೯), ಸಾಯಿ ಕುಮಾರ್ (೨೪), ನೀರಜ್ ಕುಮಾರ್ (೨೧), ರಾಮ್ (೨೦), ಶ್ರೀನಿವಾಸ್ (೩೧) ಬಂಧಿತ ಆರೋಪಿಯಾಗಿದ್ದಾರೆ.ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಕುಮಾರ್, ಫೋಟೊ ಸ್ಟುಡಿಯೊ ನಡೆಸುತ್ತಿದ್ದು, ಸ್ನೇಹಿತರೊಂದಿಗೆ ಸೇರಿ ೫೦೦ ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿ, ಚಲಾವಣೆ ಮಾಡುತ್ತಿದ್ದ. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಖೋಟಾ ನೋಟು ಚಲಾವಣೆ ಮಾಡುತಿದ್ದ ತಂಡದ ಐವರ ಬಂಧನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.