News Kannada
Thursday, December 08 2022

ಆಂಧ್ರಪ್ರದೇಶ

ವಿವಾಹವಾದ 3ನೇ ದಿನಕ್ಕೆ ವಧು ಅಪಘಾತದಲ್ಲಿ ಸಾವು

Photo Credit :

ಹೈದರಾಬಾದ್​, ;ಮದುವೆಯಾದ ಮೂರೇ ದಿನದಲ್ಲಿ ನವವಿವಾಹಿತೆ ಹಾಗೂ ಆಕೆಯ ತಂದೆ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವ ಘಟನೆ ನಿರ್ಮಲ ಜಿಲ್ಲೆಯ ಮಾದಿಪದಗದಲ್ಲಿ ದುರ್ಘಟನೆ ನಡೆದಿದೆ.
ಮೌನಿಕಾ (25), ತಂದೆ ರಾಜಯ್ಯ (50) ಮೃತದುರ್ದೈವಿಗಳು. ನಿರ್ಮಲ ಜಿಲ್ಲೆಯ ಕೊಡೆಮ್​ ವಲಯದ ಪಾಂಡವಪುರ್​ ಬಳಿ ಕಣಿವೆಯೊಂದಕ್ಕೆ ಕಾರು ಉರುಳಿ ಬಿದ್ದು ದುರಂತ ಸಂಭವಿಸಿದೆ. ಮಹಾರಾಷ್ಟ್ರದ ಬಲಹರ್ಷಾದಲ್ಲಿರುವ ವರನ ಮನೆಯಲ್ಲಿ ಆರತಕ್ಷತೆ​ ಮುಗಿಸಿಕೊಂಡು ಹಿಂದಿರುಗುವಾಗ ಅವಘಡ ಸಂಭವಿಸಿದೆ.
ಕಳೆದ ಆಗಸ್ಟ್​ 25ರಂದು ಮಹಾರಾಷ್ಟ್ರದ ಬಲಹರ್ಷಾ ಮೂಲದ ವರ ಜನಾರ್ದನ್ ಜತೆ ಮೌನಿಕಾ ಮದುವೆ ನಡೆದಿತ್ತು. ಸಾವಿನಿಂದ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ವರ ಜನಾರ್ದನ್​ ಕೂಡ ಅದೇ ಕಾರಿನಲ್ಲಿದ್ದರು. ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೌನಿಕಾ ಹಾಗೂ ರಾಜಯ್ಯ ಅಗಲಿಕೆಯಿಂದ ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

See also  ಅಮೆರಿಕದಲ್ಲಿ ಕ್ರಿಸ್‌ಮಸ್‌ ಮೆರವಣಿಗೆ ವೇಳೆ ನುಗ್ಗಿದ ಎಸ್‌ಯುವಿ : ಸ್ಥಳದಲ್ಲೇ ಐವರ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು